ಕುಂದಾಪುರ ಸೈಂಟ್ ಮೇರಿಸ್ ಪ್ರೌಢಶಾಲೆ: ಧರ್ಮಾಧ್ಯಕ್ಷರ ಭೇಟಿ

ಕುಂದಾಪುರ:ವಿದ್ಯಾರ್ಥಿಗಳು ಗುರುಹಿರಿಯಗೆ ಗೌರವ ನೀಡಿ ಆದರ್ಶ ವಿದ್ಯಾರ್ಥಿಗಳಾಗಿ, ಒಳ್ಳೆಯ ನಡತೆಯಿಂದ ಬದುಕಬೇaಕಾಗಿದೆ.ನೆಲ ಜಲ ರಕ್ಷಣೆಗೆ ಆಧ್ಯತೆ ನೀಡಬೇಕಾಗಿದ್ದು,ಒಳ್ಳೆಯ ಕಾರ್ಯದಿಂದ ದೇವರ ಆಶೀರ್ವಾದ ಲಭಿಸುತ್ತದೆ ಎಂದು ಉಡುಪಿ ಕ್ರೈಸ್ತ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಪರಮಪೂಜ್ಯ ಡಾ.ಜೆರಾಲ್ಡ್ ಐಸಾಕ್ ಲೋಬೊ ಹೇಳಿದರು.
ಅವರು ಕುಂದಾಪುರ ಸೈಂಟ್ ಮೇರಿಸ್ ಪ್ರೌಢಶಾಲೆಗೆ ಅಧಿಕೃತ ಭೇಟಿಯ ಸಂದರ್ಭದಲ್ಲಿ ಆಶೀರ್ವಾಚನ ನೀಡಿ ಮಾತನಾಡಿದರು.
ಈ ಸಂದರ್ಭದಲ್ಲಿ ಶಾಲಾ ಸಂಚಾಲಕ,ಕುಂದಾಪುರ ಹೋಲಿ ರೋಜರಿ ಇಗರ್ಜಿಯ ಪ್ರಧಾನ ಧರ್ಮಗುರು ಅತೀ ವಂ.ಫಾ.ಸ್ಟ್ಯಾನಿ ತಾವ್ರೊ,ಸಹಾಯಕ ಧರ್ಮಗುರು ಫಾ.ರೋಯ್ ಲೋಬೊ, ನೂತನ ಸಹಾಯಕ ಧರ್ಮಗುರು ಫಾ.ವಿಜಯ ಡಿ,ಸೋಜಾ ಉಪಸ್ಥಿತರಿದ್ದರು.
ಶಾಲಾ ಮುಖ್ಯೋಪಾಧ್ಯಾಯಿನಿ ಅಸುಂತಾ ಲೋಬೊ ಸ್ವಾಗತಿಸಿ,ವರದಿ ವಾಚಿಸಿದರು.ಶಿಕ್ಷಕ ಭಾಸ್ಕರ್ ಗಾಣಿಗ ವಂದಿಸಿದರು.ಶಿಕ್ಷಕ ಚಂದ್ರಶೇಖರ ಬೀಜಾಡಿ ಕಾರ್ಯಕ್ರಮ ನಿರೂಪಿಸಿದರು.