ಶ್ರೀ ರಾಮ್ ಕಟ್ಟೆ ಫ್ರೆಂಡ್ಸ್ ಪಿತ್ರೋಡಿ ಇದರ ಆಶ್ರಯದಲ್ಲಿ ಸ್ಮಾರ್ಟ್ ಇಂಡಿಯನ್ ಇಂಗ್ಲಿಷ್ ಮೀಡಿಯಂ ಸ್ಕೂಲ್ ಮೈದಾನದಲ್ಲಿ ನಡೆಯಿತು. ಫ್ರೆಂಡ್ಸ್ ಟ್ರೋಫಿ, 2, 2023 ರನ್ನು ಸ್ಮಾರ್ಟ್ ಇಂಡಿಯನ್ ಇಂಗ್ಲಿಷ್ ಮೀಡಿಯಂ ಸ್ಕೂಲ್ ನ ಆಡಳಿತ ನಿರ್ದೇಶಕರಾದ ಮಹೇಶ್ ಯು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾದ ಉದ್ಯಾವರ ಗ್ರಾಮ ಪಂಚಾಯತ್ ಸದಸ್ಯ ರಾಜೇಶ್ ಕುಂದರ್ ಪಿತ್ರೋಡಿ, ಗ್ರಾಮ ಪಂಚಾಯತ್ ಸದಸ್ಯರಾದ ಜಿತೇಂದ್ರ ಶೆಟ್ಟಿ ಉದ್ಯಾವರ, ಉದ್ಯಾವರ ಬಿಜೆಪಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾದ ರವಿ ಸಾಲಿಯನ್ ಪಡುಕರೆ ಉಪಸ್ಥಿತರಿದ್ದರು. ಪಿನ್ ಕೋಡ್ ಮಾದರಿಯ ಮುಕ್ತ ವಾಲಿಬಾಲ್ ಪಂದ್ಯಾಟದಲ್ಲಿ ಕಾರ್ಕಳ ಫ್ರೆಂಡ್ಸ್ ಕಾರ್ಕಳ ಪ್ರಥಮ ಪ್ರಶಸ್ತಿ ಪಡೆದುಕೊಂಡರೆ, ದ್ವಿತೀಯ ಸ್ಥಾನವನ್ನು ನಂದಗೋಕುಲ ಫ್ರೆಂಡ್ಸ್, ತೃತೀಯ ಸ್ಥಾನವನ್ನು ಶ್ರೀರಾಮ್ ಪಿತ್ರೋಡಿ, ಚತುರ್ಥ ಸ್ಥಾನವನ್ನು ಶ್ರೀರಾಮ್ ಫ್ರೆಂಡ್ಸ್ ಕಟ್ಟೆಗುಡ್ಡೆ ಪಡೆದುಕೊಂಡಿತ್ತು. ಸಮರೂಪ ಸಮಾರಂಭದಲ್ಲಿ ಬಾಕ್ಸಿಂಗ್ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಿರಾಜ್ ಮೆಂಡನ್ ಪಡುಕರೆ, ದೇಹಧಾಢ್ಯ ಪಟು ಗೌತಮ್ ಕುಂದರ್ ಪಿತ್ರೋಡಿ, ಸಮಾಜ ಸೇವಕ ಸುರೇಶ್ ಪಿತ್ರೋಡಿಯವರನ್ನು ಸನ್ಮಾನಿಸಲಾಯಿತು ಈ ಸಂದರ್ಭದಲ್ಲಿ ಕಾಪು ವಿಧಾನಸಭಾ ಕ್ಷೇತ್ರದ ಶಾಸಕ ಲಾಲಾಜಿ ಅರ್ ಮೆಂಡನ್, ಸಮಾಜ ಸೇವಕ ಕೃಷ್ಣಮೂರ್ತಿ ಆಚಾರ್ಯ, ದಕ್ಷಿಣ ಕನ್ನಡ ಉಡುಪಿ ಜಿಲ್ಲಾ ಮೀನುಗಾರಿಕಾ ಫೆಡರೇಷನ್ ಅಧ್ಯಕ್ಷ ಯಶ್ ಪಾಲ್ ಸುವರ್ಣ, ಸಮಾಜ ಸೇವಕಿ ನೀತಾ ಪ್ರಭು, ರಕ್ಷಿತ್ ಸಾಲಿಯನ್ ಮಲ್ಪೆ, ರಾಕೇಶ್ ಪೂಜಾರಿ, ನಿಶಾಂತ್ ಕರ್ಕಡ, ರಘುನಂದ ಪಿತ್ರೋಡಿ, ಗಿರಿಶ್ ಸುವರ್ಣ, ಯತಿರಾಜ್ ಬೋಳಾರುಗುಡ್ಡೆ, ಶ್ರೀರಾಮ ಕಟ್ಟೆ ಫ್ರೆಂಡ್ಸ್ ನ ಸದಸ್ಯರುಗಳು ಮತ್ತು ಯಂಗ್ ಸ್ಟಾರ್ ಸ್ಪೋರ್ಟ್ಸ್ & ಕಲ್ಚರಲ್ (ರಿ) ನ ಸದಸ್ಯರು ಉಪಸ್ಥಿತರಿದ್ದರು.