ಉಡುಪಿ: ಪರ್ಕಳ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನ ಶ್ರೀ ಮಹಿಷಮರ್ದಿನಿ ದೇವಿಯ ಸನ್ನಿಧಿಯಲ್ಲಿ ಮಾ.4 ರಿಂದ ತಾ. ಮಾ.9ರ ರವರೆಗೆ ವೇದಮೂರ್ತಿ ಪಾಡಿಗಾರು ಶ್ರೀ ಶ್ರೀನಿವಾಸ ತಂತ್ರಿಗಳವರ ನೇತೃತ್ವದಲ್ಲಿ ರಥೋತ್ಸವಾದಿ ಕಾರ್ಯಕ್ರಮಗಳು ನಡೆಯಲಿದೆ.
ಕಾರ್ಯಕ್ರಮ:
ಮಾ.4 ಶನಿವಾರ
ರಾತ್ರಿ 7.30 ಗಂಟೆಗೆ ವಿಘ್ನೇಶ್ವರ ಪ್ರಾರ್ಥನೆ, ಅಂಕುರಾರೋಹಣ.
ಮಾ.5 ಆದಿತ್ಯವಾರ
ಬೆಳಿಗ್ಗೆ ಗಂಟೆ 8.00ಕ್ಕೆ ಧ್ವಜಾರೋಹಣ, ಸಾಮೂಹಿಕ ಗಣಹೋಮ, ಮಹಾಪೂಜೆ, ಕಲಶಾಭಿಷೇಕ ಮಧ್ಯಾಹ್ನ 1.00 ದಿ|ಪರ್ಕಳ ಗುರುರಾಜ ಜೋಯಿಸರ್ ರವರ ಸುಪುತ್ರರಿಂದ ಸಂತರ್ಪಣೆ, ರಾತ್ರಿ ಬೈಗಿನ ಬಲಿ, ಚಂದ್ರಮಂಡಲ ರಥೋತ್ಸವ, ಮೂಡುರಸ್ತೆ ಕಟ್ಟೆಪೂಜೆ, ದೊಡ್ಡ ರಂಗಪೂಜೆ, ಭೂತ ಬಲಿ.
ಮಾ.6 ಸೋಮವಾರ
ಬೆಳಿಗ್ಗೆ ಆಶ್ಲೇಷ ಬಲಿ (ಸೇವಾಕರ್ತರು ಶ್ರೀ ಭಾಸ್ಕರ ಶೆಟ್ಟಿ ಕೆಳ ಪರ್ಕಳ), ದುರ್ಗಾ ಹೋಮ, ಮಹಾಪೂಜೆ, ರಾತ್ರಿ ಬೈಗಿನ ಬಲಿ, ಚಂದ್ರಮಂಡಲ ರಥೋತ್ಸವ, ಬೊಳ್ಜಿ ರಸ್ತೆ ಕಟ್ಟೆಪೂಜೆ, ಸ್ವಾರಿ ಬಲಿ. ಸಂಜೆ ಗಂಟೆ 6:30 ರಿಂದ 9 ರವರೆಗೆ ಅರ್ಜುನ ಯುವಕ ಮಂಡಲದ ವಠಾರದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ (ಪ್ರಾಯೋಜಕರು: ಅರ್ಜುನ ಯುವಕ ಮಂಡಲ, ಪರ್ಕಳ ಮತ್ತು ಬೊಳ್ಜಿ ರಸ್ತೆ ಕಟ್ಟೆ ಫ್ರೆಂಡ್ಸ್)
ಮಾ.7 ಮಂಗಳವಾರ
ಮಧ್ಯಾಹ್ನ 12.00 ಗಂಟೆಗೆ ರಥಾರೋಹಣ, ಶ್ರೀ ಯು. ಎಸ್. ರಾಮರಾವ್, ಉಡುಪಿ ವಸಂತ ಭವನ, ಚೆನ್ನೈ ಇವರಿಂದ ಅನ್ನ ಸಂತರ್ಪಣೆ. ರಾತ್ರಿ 7.00 ರಿಂದ 8.00 ರ ವರೆಗೆ ಉಡುಪಿಯ ಶ್ರೀ ದಾಮೋದರ ಸೇರಿಗಾರ್ ಇವರಿಂದ “ಸ್ಯಾಕ್ಸೋಫೋನ್ ವಾದನ” ರಾತ್ರಿ ಗಂಟೆ 8.00ಕ್ಕೆ ಶ್ರೀ ಮನ್ಮಹಾರಥೋತ್ಸವ ವೈವಿಧ್ಯಮ ಯಕ್ಷಗಾನ ವೇಷಗಳ ಮೆರವಣಿಗೆ ಹಚ್ಚಡ ಸೇವೆ, ಉಂಡಾರು ಚಂಡೆ ಬಳಗದವರಿಂದ ಚಂಡೆ ವಾದನ ರಾತ್ರಿ 9.00ಕ್ಕೆ ದೇವಸ್ಥಾನದ ವಠಾರದಲ್ಲಿ ಕ್ರೇಜಿ ಕಿಡ್ಸ್ ಹಾಗೂ ಸ್ಥಳೀಯರಿಂದ ನೃತ್ಯ ವೈಭವ ನಂತರ ಸನ್ನಿಧಿ ಕಲಾವಿದರು, ಉಡುಪಿ ಇವರಿಂದ ತುಳು ನಾಟಕ “ಅಪ್ಪೆ ಮಂತ್ರ ದೇವತೆ” ನಡೆಯಲಿರುವುದು (ಪ್ರಾಯೋಜಕರು ಶ್ರೀ ಮಹಾಲಿಂಗೇಶ್ವರ ಮಹಾ ಗಣಪತಿ ವಾಲಿಬಾಲ್ ಫ್ರೆಂಡ್ಸ್, ಪರ್ಕಳ)
ಮಾ.8 ಬುಧವಾರ
ಬೆಳಿಗ್ಗೆ ಗಂಟೆ 7.00ಕ್ಕೆ ಕವಾಟೋದ್ಘಾಟನೆ, ಶ್ರೀ ವ್ಯಾಘ್ರ ಚಾಮುಂಡಿ ದರ್ಶನ ಭಕ್ತರ ತುಲಾಭಾರಾದಿ ಸೇವೆ ಮಹಾಪೂಜೆ, ರಾತ್ರಿ ಚಂದ್ರಮಂಡಲ ರಥೋತ್ಸವ, ಓಕುಳಿ, ಕೆಳ ಪರ್ಕಳ ಕಟ್ಟೆಪೂಜೆ, ಅವಭೃತ ಸ್ನಾನ ರಾತ್ರಿ ಗಂಟೆ 12:30 ಕ್ಕೆ ದೇವರ ಕಟ್ಟೆಯಿಂದ ಪಂಜಿನ ಮೆರವಣಿಗೆ, ಶ್ರೀ ವ್ಯಾಘ್ರ ಚಾಮುಂಡಿ ಕೋಲ, ಯಾಗ ಶಾಲೆಯಲ್ಲಿ ಪೂರ್ಣಾಹುತಿ, ಮಂತ್ರಾಕ್ಷತೆ, ಧ್ವಜಾವರೋಹಣ
ಮಾ.9 ಗುರುವಾರ
ಮಹಾಸಂಪೋಕ್ಷಣೆ, ಮಹಾಪೂಜೆ, ರಾತ್ರಿ ಮಾರಿ, ಗೋಂದುಲ. ಕಾರ್ಯಕ್ರಮಗಳು ನಡೆಯಲಿದ್ದು, ಎಲ್ಲ ಕಾರ್ಯಕ್ರಮಕ್ಕೆ ಆದರದ ಸ್ವಾಗತವನ್ನು ಬಯಸುವ. ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರು ಶ್ರೀ ಪಿ. ಶ್ರೀನಿವಾಸ ಉಪಾಧ್ಯ, ಹಾಗೂ ಸದಸ್ಯರು ಶ್ರೀ ಮುರಳೀಧರ ನಕ್ಷತ್ರಿ, ಶ್ರೀ ಸುಖಾನಂದ ಸೆಟ್ಟಿಗಾರ, ಶ್ರೀ ಸತೀಷ ನಾಯ್ಕ, ಶ್ರೀಮತಿ ಸುಗುಣ ನಾಯ್ಕ, ಶ್ರೀ ಕೀರ್ತಿ ಕುಮಾರ್, ಶ್ರೀ ಅಕ್ಷಯ ಬಂಗೇರ, ಶ್ರೀಮತಿ ಸತ್ಯಭಾಮ ಆಚಾರ್ಯ. ಡಾ| ಪಿ. ಹರಿದಾಸ ಉಪಾಧ್ಯ, ಮೈಸೂರು, ಶ್ರೀ ರಾಮರಾವ್, ಚೆನ್ನೈ, ಶ್ರೀ ವಿ. ರಾಮದಾಸ ಹೆಗ್ಡೆ, ಪರ್ಕಳ ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷರು., ಶ್ರೀ ಬಿ. ಜಯರಾಜ ಹೆಗ್ಡೆ, ಅಧ್ಯಕ್ಷರು ಶ್ರೀ ದಿನಕರ ಶೆಟ್ಟಿ ಹೆರ್ಗ, ಕಾರ್ಯಾಧ್ಯಕ್ಷರು ಶ್ರೀ ದಿನೇಶ್ ಹೆಗ್ಡೆ ಆತ್ರಾಡಿ, ಪ್ರಧಾನ ಕಾರ್ಯದರ್ಶಿ, ಶ್ರೀ ದಿಲೀಪ್ ರಾಜ್ ಹೆಗ್ಡೆ, ಆತ್ರಾಡಿ, ಶ್ರೀ ಮಹೇಶ್ ಠಾಕೂರ್, ಪರ್ಕಳ ಸಂಚಾಲಕರು, ಶ್ರೀಮತಿ ಸುಮಿತ್ರಾ ಆರ್. ನಾಯಕ್ ಕೋಶಾಧಿಕಾರಿ, ಶ್ರೀ ರವೀಂದ್ರ ಪ್ರಭು ಸಹಾಯಕ ಕೋಶಾಧಿಕಾರಿ, ಅರ್ಚಕ ವೃಂದ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ಭಜನಾ ಮಂಡಳಿ, ಯಕ್ಷಗಾನ ಮಂಡಳಿ. ಚಂಡೆ ಬಳಗ ಹಾಗೂ ಪರ್ಕಳ, ಹೆರ್ಗ, ಹಾಗೂ ಬಡಗಬೆಟ್ಟು ಗ್ರಾಮಸ್ಥರು.