ಕಕ್ಕುಂಜೆಯ ಪಾದೆಯ ಗುಡ್ಡದಲ್ಲಿ ಬೆಂಕಿ ಅವಘಡ: ತಪ್ಪಿದ ಅನಾಹುತ

ಉಡುಪಿ ಪೆರಂಪಳ್ಳಿ ಸಮೀಪದ ಕಕ್ಕುಂಜೆಯ ಪಾದೆಯ ಬಳಿ ಕಸದ ರಾಶಿಗೆ ಆಕಸ್ಮಿತವಾಗಿ ಬೆಂಕಿ ತಗುಲಿ ಘಟನೆ ಇಂದು ಮಧ್ಯಾಹ್ನ ನಡೆದಿದೆ.

ಬೆಂಕಿ ಬಿದ್ದ ಪರಿಣಾಮ ಸುತ್ತಮುತ್ತ ದಟ್ಟ ಹೊಗೆ ಆವರಿಸಿದ್ದು, ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಯಿತು.

ಗುಡ್ಡದಲ್ಲಿ ಒಣ ಕಸ ಸಾಕಷ್ಟು ಪ್ರಮಾಣದಲ್ಲಿ ಇದ್ದ ಪರಿಣಾಮ ಬೆಂಕಿಯ‌ ಕೆನ್ನಾಲಿಗೆ ದೊಡ್ಡ ಮಟ್ಟದಲ್ಲಿ ಹರಡಿತ್ತು. ಮನೆಯೊಂದರ ಕಂಪೌಂಡ್ ಒಳಭಾಗಕ್ಕೂ ಬೆಂಕಿ ಹಬ್ಬಿತ್ತು. ತಕ್ಷಣವೇ ಸ್ಥಳೀಯರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದು, ಅದರಂತೆ ಸ್ಥಳಕ್ಕೆ ದೌಡಾಯಿಸಿದ್ದ ಅಗ್ನಿಶಾಮಕದಳದ ಸಿಬ್ಬಂದಿ ಕಾರ್ಯಾಚರಣೆ ಮೂಲಕ ಬೆಂಕಿ ನಂದಿಸಿದರು. ಆ ಮೂಲಕ ಸಂಭವಿಸಬಹುದಾಗಿದ್ದ ಅನಾಹುತವೊಂದನ್ನು ತಪ್ಪಿಸಿದ್ದಾರೆ.