ಕುಮಾರದಾರ ನದಿಯಲ್ಲಿ‌ ಮುಳುಗಿ ಬಾಲಕ‌ ಸಾವು

ಮಂಗಳೂರು: ಕುಮಾರಧಾರ ನದಿಯಲ್ಲಿ ಮುಳುಗಿ ಬಾಲಕನೋರ್ವ ಸಾವನ್ನಪ್ಪಿರುವ ಘಟನೆ ಬುಧವಾರ ದಕ್ಷಿಣ ‌ಕನ್ನಡ ಜಿಲ್ಲೆಯ ಆಲಂಕಾರು ಸಮೀಪದ ಶಾಂತಿಮೊಗರಲ್ಲಿ ಸಂಭವಿಸಿದೆ. ಸವಣೂರು ಸಮೀಪದ ಪರಣೆ ನಿವಾಸಿ ಅಶ್ಬಾಕ್ ಮೃತಪಟ್ಟ ಬಾಲಕ.
ಈತ ಸವಣೂರು ಸ.ಪ.ಪೂರ್ವ ಕಾಲೇಜಿನ ಪ್ರೌಢಶಾಲಾ ವಿದ್ಯಾರ್ಥಿಯಾಗಿದ್ದು, ಇಂದು  ಸ್ನೇಹಿತರೊಂದಿಗೆ ಶಾಂತಿಮೊಗರು ಸೇತುವೆಯ ಬಳಿ ಸ್ನಾನಕ್ಕೆ ಹೋಗಿದ್ದ. ನೀರಿನಲ್ಲಿ ಸ್ನಾನ‌ ಮಾಡುತ್ತಿದ್ದ ವೇಳೆ ಸುಳಿಗೆ ಸಿಲುಕಿದ ಈತ  ಕೂಡಲೇ ನೀರಿನಲ್ಲಿ ನಾಪತ್ತೆಯಾಗಿದ್ದಾನೆ.
ಬಳಿಕ ಸ್ಥಳೀಯರು ಬಾಲಕನ ಶವಕ್ಕಾಗಿ ಹುಡುಕಾಟ ನಡೆಸಿದ್ದು, ಕೆಲ ಹೊತ್ತಿನ ‌ಬಳಿಕ ಶವ ಪತ್ತೆಯಾಗಿದೆ. ಸ್ಥಳಕ್ಕೆ ಸ್ಥಳೀಯ ಠಾಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.