ಜೆ.ಇ.ಇ.ಮೈನ್-ಬಿ.ಆರ್ಕ್ ಫಲಿತಾಂಶ: ಜ್ಞಾನಸುಧಾ ವಿದ್ಯಾರ್ಥಿಗಳ ಸಾಧನೆ

ಕಾರ್ಕಳ :ರಾಷ್ಟ್ರಮಟ್ಟದಲ್ಲಿಎನ್.ಟಿ.ಎ ನಡೆಸಿದ ಜೆ.ಇ.ಇ ಮೈನ್ – ಬಿ.ಆರ್ಕ್ ಪರೀಕ್ಷೆಯಲ್ಲಿಗಣಿತನಗರದ ಕಾರ್ಕಳ ಜ್ಞಾನಸುಧಾ ಪಿ.ಯು ಕಾಲೇಜಿನ ಇಬ್ಬರು ವಿದ್ಯಾರ್ಥಿಗಳು 99ಕ್ಕಿಂತ ಅಧಿಕ ಪರ್ಸಂಟೈಲ್, 6 ವಿದ್ಯಾರ್ಥಿಗಳು 90ಕ್ಕಿಂತ ಅಧಿಕ ಪರ್ಸಂಟೈಲ್ ಗಳಿಸಿ ಉತ್ತಮ ಸಾಧನೆ ಮಾಡಿರುತ್ತಾರೆ.

ಸಂಸ್ಥೆಯ ವಿದ್ಯಾರ್ಥಿಗಳಾದ ಶ್ರೀಕಾಂತ್.ಎಚ್. 99.64 ಪರ್ಸಂಟೈಲ್ ಹಾಗೂ ಚಮನ್ ಡಿ.ಪಿ 99.32 ಪರ್ಸಂಟೈಲ್ ಗಳಿಸುವುದರ ಜೊತೆಗೆ, ಸೂರ್ಯ ವಿ. 96.67 ಅಖಿಲ್‌ ದಯಾನಂದ ನಾಯಕ್ 92.22 ಶ್ರೀರಾಮ್ ಗಜಾನನ ಪಟಗಾರ್ 92.22 ಅಮೋಘ ಎಸ್.ಆರ್.91.84 ಪರ್ಸಂಟೈಲ್ ಗಳಿಸಿದ್ದಾರೆ.

ಅಜೆಕಾರ್ ಪದ್ಮಗೋಪಾಲ್‌ಎಜ್ಯುಕೇಶನ್‌ ಟ್ರಸ್ಟ್ನಅಧ್ಯಕ್ಷ ಡಾ.ಸುಧಾಕರ್ ಶೆಟ್ಟಿ, ವಿದ್ಯಾರ್ಥಿಗಳ ಸಾಧನೆಯನ್ನು ಅಭಿನಂದಿಸಿದ್ದಾರೆ.