ಕೊಡವೂರು: ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಆಚರಣೆಯ ನಿಮಿತ್ತ ಕೊಡವೂರು ವಾರ್ಡಿನ ಶಿವಾಜಿ ಪಾರ್ಕ್ ನಿರ್ಮಾಣ ಸಮಿತಿ ವತಿಯಿಂದ ಛತ್ರಪತಿ ಶಿವಾಜಿ ಜಯಂತಿ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ವಿಜಯ್ ಕೊಡವೂರು, ಪವಿತ್ರ ಹಿಂದೂ ಧರ್ಮವನ್ನು ಅನ್ಯ ಮತದವರು ಮತಾಂತರ ಮಾಡುವ ಮೂಲಕ ನಮ್ಮ ಧರ್ಮವನ್ನು ನಿಂದಿಸುವ ಕಾರ್ಯ ಮಾಡುತ್ತಿದ್ದಾರೆ. ಹಿಂದೂ ಧರ್ಮ ಹಿಂದೂ ದೇವರು ಹಿಂದೂ ದೈವಗಳು ಸರಿ ಇಲ್ಲ ಅದರ ಆಚಾರ ವಿಚಾರಗಳು ಸರಿ ಇಲ್ಲ ಅದರ ಪದ್ಧತಿಗಳು ಸರಿ ಇಲ್ಲ ಎಂದು ಕಾಲೇಜಿಗೆ ಹೋಗುವ ಯುವತಿಯರ ತಲೆ ಕೆಡಿಸಿ, ಆಮಿಷ ನೀಡಿ ಮತಾಂತರ ಮಾಡುವಂತ ಪ್ರಯತ್ನ ಈಗಲೂ ನಡೆಯುತ್ತಿವೆ. ಕೊಡವೂರು ವಾರ್ಡಿನಲ್ಲಿ ಕಳೆದ 50 ವರ್ಷಗಳಿಂದ 28 ಕುಟುಂಬಗಳು ಮತಾಂತರವಾಗಿದೆ. 3 ಕಾಲೇಜು ಯುವತಿಯರನ್ನು ಮತಾಂತರ ಮಾಡುವ ಮೂಲಕ ಲವ್ ಜಿಹಾದ್ ಮಾಡುವ ಪ್ರಯತ್ನ ನಡೆಯುತ್ತಿದೆ. ನಮ್ಮ ಮನೆಗೆ ಬಂದು ಹಿಂದೂ ಧರ್ಮದ ಬಗ್ಗೆ ಅವಹೇಳನ ಮಾಡಿ ಇನ್ನೊಂದು ಮತಕ್ಕೆ ಮತಾಂತರ ಮಾಡುವವರು ಬಂದಲ್ಲಿ ನಾವು ಎದೆ ಕೊಟ್ಟು ಇದನ್ನು ವಿರೋಧಿಸಬೇಕು. ಹೀಗೆ ಆದಾಗ ಮಾತ್ರ ನಮ್ಮ ಧರ್ಮ ಉಳಿದು ಈ ದೇಶ ಪರಮ ವೈಭವ ಸ್ಥಿತಿಗೆ ತಲುಪಲು ಸಾಧ್ಯ ಎಂದರು.
ಈ ಸಂದರ್ಭದಲ್ಲಿ ಶಿವಾಜಿ ಪಾರ್ಕ್ ನಿರ್ವಹಣಾ ಸಮಿತಿ ಅಧ್ಯಕ್ಷ ಮೋಹನ್ ಸುವರ್ಣ, ಯಶ್ ಪಾಲ್ ಸುವರ್ಣ ನ್ಯಾಷನಲ್ ಜನರಲ್ ಸೆಕ್ರೆಟರಿ ಒಬಿಸಿ ಮೋರ್ಚಾ, ಕೊಡವೂರು ವ್ಯವಸಾಯ ಸೇವಾ ಸಂಘದ ಅಧ್ಯಕ್ಷ ನಾರಾಯಣ್ ಬಲ್ಲಾಳ್,ಕೊಡವೂರು ವಾರ್ಡ್ ಅಭಿವೃದ್ದಿ ಸಮಿತಿ ಅಧ್ಯಕ್ಷ ಅಶೋಕ್ ಶೆಟ್ಟಿಗಾರ್, ಧರ್ಮಸ್ಥಳ ಗ್ರಾಮೀಣಾಭಿವೃದ್ದಿ ಯೋಜನೆ ಸೇವಾ ಪ್ರತಿನಿಧಿ ಶ್ರೀಮತಿ ರಾಧಾ ಭಾಸ್ಕರ್, ವಿನೋದ ಲಕ್ಷ್ಮೀ ನಗರ ಮತ್ತಿತರರು ಉಪಸ್ಥಿತರಿದ್ದರು.