ಉಡುಪಿ: ಉಪಾಧ್ಯೇ ಸ್ಕೂಲ್ ಆಫ್ ಡಾನ್ಸ್ ಪ್ರಸ್ತುತ ಪಡಿಸುವ ‘ಭಾವ’ ಭರತನಾಟ್ಯ ನೃತ್ಯ ಪ್ರದರ್ಶನವು ಮಾ.4 ರಂದು ಸಂಜೆ 7 ಗಂಟೆಯಿಂದ ಉಡುಪಿ ಕೃಷ್ಣ ಮಠದ ರಾಜಾಂಗಣ ವೇದಿಕೆಯಲ್ಲಿ ನಡೆಯಲಿದ್ದು, ಧನ್ಯಶ್ರೀ ಪ್ರಭು ಭರತನಾಟ್ಯ ನೃತ್ಯ ಪ್ರದರ್ಶನವನ್ನು ನೀಡಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಕರ್ನಾಟಕ ಕಲಾಶ್ರೀ ಗುರು ಉಲ್ಲಾಳ ಮೋಹನ್ ಕುಮಾರ್ ಹಾಗೂ ನಾಟ್ಯ ಮಯೂರಿ ಗುರು ವಿದುಷಿ ಶ್ರೀಮತಿ ಲಕ್ಷ್ಮೀ ಗುರುರಾಜ್ ಭಾಗವಹಿಸಲಿದ್ದಾರೆ.