ಕಾರ್ಕಳ: ಭಾರತೀಯ ಜನತಾ ಪಾರ್ಟಿ ಯುವ ಮೋರ್ಚಾ ಕಾರ್ಕಳ ವತಿಯಿಂದ ಐತಿಹಾಸಿಕ ಬೈಕ್ ರ್ಯಾಲಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಮಾಜಿ ಐಪಿಎಸ್ ಅಧಿಕಾರಿ ತಮಿಳುನಾಡಿನ ಬಿಜೆಪಿ ರಾಜ್ಯಾಧ್ಯಕ್ಷ ಅಣ್ಷಾಮಲೈ ಕೆ., ಕಾರ್ಕಳ ಜೋಡುರಸ್ತೆಯ ಪೂರ್ಣಿಮಾ ಸಿಲ್ಕ್ಸ್ ಗೆ ಭೇಟಿ ನೀಡಿದರು.
ಸಂಸ್ಥೆಯ ಮಾಲಕ ರವಿಪ್ರಕಾಶ್ ಪ್ರಭು ಅಣ್ಣಾಮಲೈ ಅವರಿಗೆ ಶಾಲು ಹೊದಿಸಿ ಸನ್ಮಾನಿಸಿದರು. ಸಂಸ್ಥೆಯ ಪಾಲುದಾರೆ ಶ್ರೀಮತಿ ಕಿರಣ ರವಿಪ್ರಕಾಶ್, ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಸುರೇಶ್ ನಾಯಕ್ ಉಪಸ್ಥಿತರಿದ್ದರು.