ಟೋಕಿಯೊ: ಯುನೈಟೆಡ್ ಸ್ಟೇಟ್ಸ್ ಜಿಯೋಲಾಜಿಕಲ್ ಸರ್ವೆ ಪ್ರಕಾರ, ಜಪಾನ್ನ ಉತ್ತರ ದ್ವೀಪವಾದ ಹೊಕ್ಕೈಡೋದ ಪೂರ್ವ ಭಾಗದಲ್ಲಿ ಶನಿವಾರ 6.1 ತೀವ್ರತೆಯ ಭೂಕಂಪ ಸಂಭವಿಸಿದೆ. ನ್ಯಾಷನಲ್ ರಿಸರ್ಚ್ ಇನ್ಸ್ಟಿಟ್ಯೂಟ್ ಫಾರ್ ಅರ್ಥ್ ಸೈನ್ಸ್ ಮತ್ತು ಡಿಸಾಸ್ಟರ್ ರೆಸಿಲಿಯನ್ಸ್ ಪ್ರಕಾರ ಭೂಕಂಪನವು ನೆಮುರೊ ಪರ್ಯಾಯ ದ್ವೀಪದಲ್ಲಿ 61 ಕಿಲೋಮೀಟರ್ (38 ಮೈಲುಗಳು) ಆಳದಲ್ಲಿ ಅಪ್ಪಳಿಸಿದೆ. ಆದಾಗ್ಯೂ, ಅಧಿಕಾರಿಗಳು ಸುನಾಮಿ ಎಚ್ಚರಿಕೆ ನೀಡಿಲ್ಲ.
ಜಪಾನ್ನ ಉತ್ತರದ ಪ್ರಮುಖ ದ್ವೀಪಗಳಲ್ಲಿ ಒಂದಾದ ಹೊಕ್ಕೈಡೊ ನಗರದಲ್ಲಿ ಸೋಮವಾರದಂದು 5.1 ತೀವ್ರತೆಯ ಭೂಕಂಪ ಸಂಭವಿಸಿತ್ತು. ಇದೀಗ ಮತ್ತೊಂದು ಬಾರಿ ಭೂಮಿ ಕಂಪಿಸಿದೆ. ಇದುವರೆಗೆ ಹಾನಿ ಸಂಭವಿಸಿದ ವರದಿಗಳಾಗಿಲ್ಲ.
Earthquake of magnitude 6.1 hits #Hokkaido in #Japan. #JapanEarthquake #earthquake #japanQuake pic.twitter.com/Q8ZQCUrSoV
— Harish Deshmukh (@DeshmukhHarish9) February 26, 2023