ತುಂಡಾಗಿ ಬಿದ್ದ ವಿದ್ಯುತ್ ತಂತಿ ತುಳಿದು ತಂದೆ ಮಗಳ‌ ಸಾವು: ವಾಮದಪದವಿನಲ್ಲಿ ದಾರುಣ ಘಟನೆ 

ಮಂಗಳೂರು: ತುಂಡಾಗಿ ಬಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ತಂದೆ ಮತ್ತು ಪುತ್ರಿ ಸಾವನ್ನಪ್ಪಿದ ಘಟನೆ ಮಂಗಳವಾರ ಬಂಟ್ವಾಳ ತಾಲೂಕಿನ ವಾಮದಪದವು ಎಂಬಲ್ಲಿ ನಡೆದಿದೆ.
ಸ್ಥಳೀಯ ನಿವಾಸಿ ಪ್ರಗತಿಪರ ಕೖಷಿಕ ಗೋಪಾಲಕೖಷ್ಣ ಶೆಟ್ಟಿ (65) ಮತ್ತು ಅವರ ಪುತ್ರಿ ದಿವ್ಯಾ ಶೆಟ್ಟಿ (29) ಮೃತಪಟ್ಟ ದುರ್ದೈವಿಗಳು. 
ಅಡಿಕೆ ತೋಟದ ಸಮೀಪದಲ್ಲಿ ವಿದ್ಯುತ್ ತಂತಿಗಳು ತುಂಡಾಗಿ ಬಿದ್ದಿತ್ತು. ಅದನ್ನರಿಯದೇ ತುಳಿದು ಸಾವನ್ನಪಿದ್ದಾರೆ ಎನ್ನಲಾಗಿದೆ.
ಮೆಸ್ಕಾಂ ನಿಲ೯ಕ್ಷ್ಯ ವಹಿಸಿದೆ ಎಂದು ಆರೋಪಿಸಿದ ಸ್ಥಳೀಯರು ಮೆಸ್ಕಾಂ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.