ಉಡುಪಿ: ಖ್ಯಾತ ಸಾಹಿತಿ, ಕವಿ, ಹರಿದಾಸ, ತಾಳಮದ್ದಳೆ ಅರ್ಥದಾರಿ, ಯಕ್ಷಗಾನ ಕಲಾವಿದ ಅಂಬಾತಯ ಮುದ್ರಾಡಿ ವಿಧಿವಶರಾಗಿದ್ದಾರೆ. ರಾಜ್ಯೋತ್ಸವ ಹಾಗೂ ಪಾರ್ತಿಸುಬ್ಬ ಪ್ರಶಸ್ತಿಪುರಸ್ಕೃತರಾಗಿದ್ದ ಮುದ್ರಾಡಿಯವರು ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕಿನ ಮುದ್ರಾಡಿಯವರು.
ಕಲೆ ಮತ್ತು ಸಾಹಿತ್ಯ ರಂಗದ ಹಲವು ಪ್ರಕಾರಗಳಲ್ಲಿ ಸೇವೆ ಸಲ್ಲಿಸಿರುವ ಅಂಬಾತನಯ ಮುದ್ರಾಡಿ (88) ಮಂಗಳವಾರ ಮುಂಜಾನೆ ಎಲ್ಲರನ್ನೂ ಅಗಲಿದ್ದಾರೆ.
ಇತ್ತೀಚೆಗಷ್ಟೇ ಉಡುಪಿಯಲ್ಲಿ ನಡೆದ ಪ್ರಥಮ ಯಕ್ಷಗಾನ ಸಮ್ಮೇಳನದಲ್ಲಿ ಸಮ್ಮೇಳನಾಧ್ಯಕ್ಷರೊಂದಿಗೆ ಸಂವಾದದಲ್ಲಿ ಪಾಲ್ಗೊಂಡಿದ್ದರು. ಮೃತರು ಪತ್ನಿ, ಮೂವರು ಪುತ್ರರು, ಐವರು ಪುತ್ರಿ, ಅಪಾರ ಶಿಷ್ಯ ವೃಂದ ಹಾಗೂ ಅಭಿಮಾನಿ ಬಳಗವನ್ನು ಅಗಲಿದ್ದಾರೆ.












