ಕುತ್ಯಾರು ಕರ್ಮಾರು ಜೆಡ್ಡು ಹೊಸಮನೆ ಪುಣ್ಯ ಕ್ಷೇತ್ರದ ವಾರ್ಷಿಕ ನೇಮೋತ್ಸವ ಸಂಪನ್ನ

ಕುತ್ಯಾರು: ಕರ್ಮಾರು ಜೆಡ್ಡು ಹೊಸಮನೆ ಪುಣ್ಯ ಕ್ಷೇತ್ರದ ಕಾರಣಿಕದ ದೈವ ಮಂತ್ರದೇವತೆ ಶ್ರೀ ವರ್ತೇಶ್ವರಿ ಶ್ರೀ ದೇವಿ ಕಲ್ಕುಡ ವಾರ್ಷಿಕ ನೇಮೋತ್ಸವವು ಫೆ.18 ರಂದು ಕ್ಷೇತ್ರದ ಉಸ್ತುವಾರಿ ಪ್ರಧಾನ ಅರ್ಚಕ ಭೋಜ ಪಾತ್ರಿ ಕುತ್ಯಾರು ಇವರ ಧಾರ್ಮಿಕ ಸಲಹೆಯೊಂದಿಗೆ ನಡೆಯಿತು. ಬೆಳಿಗ್ಗೆ ತುಲಾಭಾರ ಸೇವೆ ರಾತ್ರಿ ಶ್ರೀ ದೈವ ದೇವರುಗಳ ನೇಮೋತ್ಸವ ನಡೆದು ಮರುದಿನ ಬೆಳಿಗ್ಗೆ ಜಟ್ಟಿಗ ಗುಳಿಗ ಕೊರಗಜ್ಜನ ನೇಮೋತ್ಸವ ನಡೆದು ಅಗೆಲ್ ತಂಬಿಲ ಸೇವೆ ಸಂಪನ್ನಗೊಂಡಿತು.

ಕ್ಷೇತ್ರದ ಅರ್ಚಕ ಚಂದ್ರಶೇಖರ ವಾಸುದೇವ ಪಾತ್ರಿ, ಶಿವರಾಜ ಪಾತ್ರಿ, ಕ್ಷೇತ್ರದ ಸಾರ್ವಜನಿಕ ಸಂಪರ್ಕಾಧಿಕಾರಿ ನ್ಯಾಯವಾದಿ ಜಗದೀಶ ಮೂಲ್ಯ ಕುತ್ಯಾರು, ಶಿರ್ವ ಠಾಣಾಧಿಕಾರಿ ರಾಘವೇಂದ್ರ ಸಿ, ಗುರ್ಮೆ ಫೌಂಡೇಶನ್ ಅಧ್ಯಕ್ಷ ಸುರೇಶ್ ಶೆಟ್ಟಿ ಗುರ್ಮೆ, ಕಳತ್ತೂರು ಕುಶಲ ಶೇಖರ ಶೆಟ್ಟಿ ಆಡಿಟೋರಿಯಂನ ಆಡಳಿತ ನಿರ್ದೇಶಕ ಶೇಖರ ಬಿ ಶೆಟ್ಟಿ, ಕಾಪು ಜನಸಂಪರ್ಕ ಸೇವಾ ವೇದಿಕೆ ಅಧ್ಯಕ್ಷ ದಿವಾಕರ ಬಿ ಶೆಟ್ಟಿ, ಉಡುಪಿ ವಕೀಲರ ಸಂಘದ ಅಧ್ಯಕ್ಷ ನಾಗರಾಜ್ ಬಿ, ವಕೀಲ ಸಂಘದ ಕಾರ್ಯದರ್ಶಿ ರೊನಾಲ್ಡ್ ಪ್ರವೀಣ್ ಪಿಂಟೋ ,ಸಾಯಿನಾಥ್ ಶೆಟ್ಟಿ ಕುತ್ಯಾರು, ಕಿಶೋರ್ ಶೆಟ್ಟಿ ಕುತ್ಯಾರು ಹಾಗೂ ಕ್ಷೇತ್ರಕ್ಕೆ ಸಂಬಂಧಿಸಿದ ಕುಟುಂಬಿಕರು ಹಾಗೂ ಊರ ಪರವೂರಿನ ನಾಗರಿಕರು ಭಾಗವಹಿಸಿದರು.