ಫೆ.22 ರಂದು ಶಿವಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಅತಿರುದ್ರಯಾಗ ಮಹಾಸಂಕಲ್ಪ

ಶಿವಪಾಡಿ: ಶ್ರಿ ಉಮಾಮಹೇಶ್ವರ ದೇವಸ್ಥಾನದಲ್ಲಿ ಫೆ.22 ರಂದು ಬೆಳಿಗ್ಗೆ 6.30 ಕ್ಕೆ ಅತಿರುದ್ರಯಾಗ ಮಹಾಯಾಗದ ಮಹಾಸಂಕಲ್ಪವು ನೂರ ಇಪ್ಪತ್ತೊಂದು ಋತ್ವಿಜರಿಂದ ಶ್ರೀ ರುದ್ರ ಪುರಶ್ಚರಣ ಪ್ರಾರಂಭವಾಗಲಿದೆ.

ಶ್ರೀದೇವರಿಗೆ ನವಕ ಪ್ರಧಾನ ಹೋಮ ಪುರಸ್ಸರ ನವಕಲಶಾಭಿಷೇಕ ಮಹಾಪೂಜೆ ಹಾಗೂ ಅನ್ನಸಂತರ್ಪಣೆ ನಡೆಯಲಿದೆ.

ಮಧ್ಯಾಹ್ನ 12 ರಿಂದ ವಿವಿಧ ಭಜನಾ ಮಂಡಳಿಗಳಿಂದ ಭಕ್ತಿ ಮಾಧುರ್ಯ ಕಾರ್ಯಕ್ರಮ, ಸಾಯಂಕಾಲ 5.30 ರಿಂದ ಧಾರ್ಮಿಕ ಉಪನ್ಯಾಸ ಕುಮಾರಿ ಅಕ್ಷಯ ಗೋಖಲೆ ಇವರಿಂದ.

ಸಂಜೆ 6.30 ರಿಂದ ಯಕ್ಷಗಾನ ವೈಭವ- ರಾಘವೇಂದ್ರ ಆಚಾರ್ಯ ಸಾರಥ್ಯದಲ್ಲಿ ಜಂಸಾಲೆ ಕಾರ್ಯಕ್ರಮ

ಅತಿರುದ್ರ ಮಹಾಯಾಗಕ್ಕೆ ಅಕ್ಕಿ ಬೇಳೆಕಾಳು ಧವಸಧಾನ್ಯ ತೆಂಗಿನಕಾಯಿ ಫಲವಸ್ತುಗಳನ್ನು ಸಮರ್ಪಿಸಲು ಅವಕಾಶವಿದ್ದು, ಭಕ್ತರು ಶ್ರೀಕ್ಷೇತ್ರಕ್ಕೆ ಹೊರೆಕಾಣಿಕೆಗಳನ್ನು ಕಳುಹಿಸಬಹುದು ಎಂದು ಆಡಳಿತ ಮಂಡಳಿ ತಿಳಿಸಿದೆ.