ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ ಎಸ್.ಕೆ ಭಗವಾನ್ ಇನ್ನಿಲ್ಲ

ಬೆಂಗಳೂರು: ದೊರೈ-ಭಗವಾನ್‌ ಜೋಡಿಯ ಖ್ಯಾತ ನಿರ್ದೇಶಕರಾದ ಎಸ್.ಕೆ ಭಗವಾನ್ ಅನಾರೋಗ್ಯದಿಂದಾಗಿ ಇಂದು ಕೊನೆಯುಸಿರೆಳೆದಿದ್ದಾರೆ. ಅನಾರೋಗ್ಯ ನಿಮಿತ್ತ ಡಿಸೆಂಬರ್ ನಲ್ಲಿ ಬೆಂಗಳೂರಿನ ಜಯದೇವ ಆಸ್ಪತ್ರೆಗೆ ದಾಖಲಾಗಿದ್ದ ಭಗವಾನ್ ಇಂದು ನಿಧನರಾಗಿದ್ದಾರೆ. ಅವರಿಗೆ 90 ವರ್ಷ ವಯಸ್ಸಾಗಿತ್ತು.

ದೊರೈ- ಭಗವಾನ್ ಜೋಡಿ 55 ಕನ್ನಡ ಚಿತ್ರಗಳನ್ನು ನಿರ್ದೇಶಿಸಿದ್ದು, ಇದರಲ್ಲಿ 24 ಸಿನಿಮಾಗಳು ಕಾದಂಬರಿಗಳನ್ನು ಆಧರಿಸಿ ಮಾಡಿದ ಚಿತ್ರಗಳಾಗಿದ್ದವು. ಕನ್ನಡದ ಘಟಾನುಘಟಿ ನಟರು ದೊರೈ-ಭಗವಾನ್ ಚಿತ್ರಗಳಲ್ಲಿ ನಟಿಸಿ ಪ್ರಖ್ಯಾತರಾಗಿದ್ದಾರೆ.