ಕಾರ್ಕಳ: ಮುನಿಯಾಲು ಗೋಧಾಮಕ್ಕೆ ಭೇಟಿ ನೀಡಿರುವುದು ಅಮೂಲ್ಯ ಕ್ಷಣ. ಒಬ್ಬ ಕೈಗಾರಿಕೋದ್ಯಮಿ ಪರಿಸರ ಪ್ರೇಮಿಯಾಗಿ ದೇಶೀಯ ಗೋವುಗಳ ಜೊತೆ ಕೃಷಿಯನ್ನು ಕೂಡಾ ಹೇಗೆ ಮಾಡಬಹುದೆಂದು ತೋರಿಸಿಕೊಟ್ಟಿರುವ ರೀತಿ ಎಲ್ಲರಿಗೂ ಮಾದರಿ. ಕೃಷಿಕರು ಸರಿಯಾದ ನಿಟ್ಟಿನಲ್ಲಿ ಯೋಚಿಸಿ ಕೃಷಿ ಮಾಡಿದಲ್ಲಿ ಈ ಕ್ಷೇತ್ರವೂ ಲಾಭಾದಾಯಕವಾಗಲಿದೆ ಎನ್ನುವುದಕ್ಕೆ ಮುನಿಯಾಲು ಗೋಧಾಮ ಸಾಕ್ಷಿಯಾಗಿ ನಿಂತಿದೆ. ಇಲ್ಲಿನ ಗೋಧಾಮ ಗೋಲೋಕವನ್ನೇ ಸೃಷ್ಟಿಸಿದ್ದು, ದೇಶಕ್ಕೆ ಅತ್ಯಮೂಲ್ಯ ಕೊಡುಗೆ ನೀಡಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಎಚ್. ಎಲ್ ಮಂಜುನಾಥ್ ಹೇಳಿದರು.
ಅವರು ಹೆಬ್ರಿ ಸಮೀಪದ ಮುನಿಯಾಲಿನಲ್ಲಿರುವ ದೇಶೀಯ ಗೋವಿನ ತಳಿಗಳ ಅಭಿವೃದ್ದಿ ಸಂಜೀವಿನಿ ಫಾರ್ಮ್ ಮತ್ತು ಡೈರಿ ಗೋಧಾಮಕ್ಕೆ ಭಾನುವಾರ ಭೇಟಿ ನೀಡಿ ಪೂಜೆ ಸಲ್ಲಿಸಿದರು.
ಗೋಧಾಮ ಸಂಸ್ಥಾಪಕ ಜಿ.ರಾಮಕೃಷ್ಣ ಆಚಾರ್, ಕಾರ್ಯದರ್ಶಿ ಸವಿತಾ ಆರ್. ಆಚಾರ್, ಸುಕುಮಾರ್ ಮುನಿಯಾಲು ಉಪಸ್ಥಿತರಿದ್ದರು.