ಉಡುಪಿ: ಇಲ್ಲಿನ ಕೆಎಂ ಮಾರ್ಗ ಮುಖ್ಯ ರಸ್ತೆಯಲ್ಲಿರುವ ಸಿಪಿಸಿ ಪ್ಲಾಜಾದಲ್ಲಿ ಹೆಲಿಯೋಸ್ -ಟೈಟನ್ ವರ್ಲ್ಡ್ ಎಕ್ಸ್ಕ್ಲೂಸಿವ್ ಶೋರೂಂನ ಉದ್ಘಾಟನಾ ಸಮಾರಂಭವು ಫೆ. 9 ಗುರುವಾರದಂದು ನಡೆಯಿತು.
ಟೈಟನ್ ಕಂಪನಿ ಲಿಮಿಟೆಡ್ ಮತ್ತು ಉಡುಪಿಯ ಟೈಮ್ ಪ್ಯಾಲೇಸ್ ವತಿಯಿಂದ ನೂತನ ಎಕ್ಸ್ ಕ್ಲೂಸಿವ್ ಶೋ ರೂಂ ಅನ್ನು ಟಾಟಾ ಸನ್ಸ್ ಲಿಮಿಟೆಡ್ ನ ನಿರ್ದೇಶಕ ಭಾಸ್ಕರ್ ಭಟ್ ಉದ್ಘಾಟಿಸಿ ಮಾತನಾಡಿ, ಕಳೆದ 36 ವರ್ಷಗಳಿಂದ ಟೈಟನ್ನಲ್ಲಿ ವಾಚ್ಗಳ ಉದ್ಯಮದಲ್ಲಿ ನಿರತವಾಗಿದೆ. ಇಷ್ಟು ವರ್ಷಗಳಲ್ಲಿ ಮಾರುಕಟ್ಟೆಯಲ್ಲಿ ಸಕಾರಾತ್ಮಕ ಬದಲಾವಣೆ ನಡೆದಿದೆ. ಟೈಟನ್ ನ ಎಲ್ಲಾ ಬ್ರ್ಯಾಂಡ್ಗಳ ಮೂಲಕ ನಾವು ಮಾರುಕಟ್ಟೆಯಲ್ಲಿ ಹಿಡಿತಹೊಂದಿದ್ದೇವೆ. ಗ್ರಾಹಕರು ಬದಲಾವಣೆಯನ್ನು ಬಯುಸುತ್ತಾರಾದ್ದರಿಂದ, “ಹೆಲಿಯೊಸ್” ಆ ಬದಲಾವಣೆಯನ್ನು ಪ್ರತಿನಿಧಿಸುತ್ತದೆ. ಗ್ರಾಹಕರು ಈಗ ಟೈಟನ್ ಅಲ್ಲದೆಯೂ ಇನ್ನಿತರ ಬ್ರ್ಯಾಂಡ್ಗಳನ್ನು ಬಯಸುತ್ತಿದ್ದಾರೆ. ಇಲ್ಲೀಗ ನೀವು ಸೀಕೊ, ಫಾಸಿಲ್, ಗೆಸ್, ಅರ್ಮಾನಿ ಎಕ್ಸ್ಚೇಂಜ್, ಟಾಮಿ ಹಿಲ್ಫಿಗರ್, ಅನ್ನಿ ಕ್ಲೀನ್ ಮತ್ತು ಟೈಟನ್ ಮುಂತಾದ ಬ್ರ್ಯಾಂಡ್ ಗಳನ್ನು ಕೊಳ್ಳಬಹುದು. ಗ್ರಾಹಕರು, ಕಂಪನಿ ಮತ್ತು ಪಾಲುದಾರರು ಎಲ್ಲರೂ ಜೊತೆಯಾಗಿದ್ದಾಗ ಮಾತ್ರ ಅಭಿವೃದ್ದಿ ಹೊಂದಲು ಸಾಧ್ಯ. ಮ್ಯಾಕ್ಸಿಮ್ ಸಲ್ಧನಾ ಮತ್ತು ಅವರ ಕುಟುಂಬಕ್ಕೆ ನಾನು ತುಂಬಾ ಕೃತಜ್ಞನಾಗಿದ್ದೇನೆ ಎಂದರು.
ಸಾಯಿ ರಾಧಾ ಗ್ರೂಪ್ಸ್ ಆಡಳಿತ ನಿರ್ದೇಶಕ ಮನೋಹರ್ ಎಸ್ ಶೆಟ್ಟಿ, ಮಾಂಡವಿ ರಿಯಲ್ ಎಸ್ಟೇಟ್ ಡೆವಲಪರ್ಸ್ ನ ಡಾ.ಜೆರಿ ವಿನ್ಸೆಂಟ್ ಡಯಾಸ್, ನೈನಾ ಫ್ಯಾನ್ಸಿಯ ಮೊಹಮ್ಮದ್ ಮೌಲಾ, ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ನೇತ್ರಾಲಯ ವೈದ್ಯ ನಿರ್ದೇಶಕ ಡಾ.ಕೃಷ್ಣ ಪ್ರಸಾದ್ ಕೂಡ್ಲು ,
ಮ್ಯಾಕ್ಸಿಮ್ ಸಲ್ಡಾನ್ಹಾ ಮತ್ತು ಗ್ರೆಟ್ಟಾ ಸಲ್ಧನ್ಹಾ, ಲಿಯಾನ್, ಒನೆಲ್, ರೇವತಿ ರಂಗನ್, ಚೇತನ್ ಮುಕ್ಕಾಟಿರ,ಅನುಪ್ ಗಣಪತಿ, ಹರೀಶ್, ಸಂದೇಶ, ಕಾರ್ತಿಕ್, ಹರೀಶ್ ಉಪಸ್ಥಿತರಿದ್ದರು.
ಹೊಸ ಶೋರೂಮ್ನಲ್ಲಿ ಸೀಕೊ, ಅರ್ಮಾನಿ ಎಕ್ಸ್ಚೇಂಜ್, ಫಾಸಿಲ್, ಗೆಸ್, ಸಿಟಿಜನ್ ಮತ್ತು ಟೈಟನ್ ಬ್ರ್ಯಾಂಡ್ಗಳಾದ ನೆಬ್ಯುಲಾ, ಎಡ್ಜ್, ಕ್ಸೈಲಿಸ್ ರಾಗಾ, ಫಾಸ್ಟ್ರ್ಯಾಕ್, ಸ್ಕಿನ್, ಸೋನಾಟಾ, ಅಮಾಜ್ಫಿಟ್ ಮತ್ತು ಇನ್ನೂ ಅನೇಕ ಅಂತರಾಷ್ಟ್ರೀಯ ಬ್ರ್ಯಾಂಡ್ಗಳ ವಿಶೇಷ ಶ್ರೇಣಿಯ ವಾಚ್ಗಳಿದ್ದು, ವಾಚ್ಗಳ ಶ್ರೇಣಿಯು ರೂ 750 ರಿಂದ ಪ್ರಾರಂಭವಾಗಿ ಸುಮಾರು ರೂ 1.5 ಲಕ್ಷದವರೆಗೆ ಇರಲಿದೆ.
ವಾಚ್ಗಳ ಹೊರತಾಗಿ, ಮಳಿಗೆಯು ವ್ಯಾಪಕ ಶ್ರೇಣಿಯ ಸ್ಮಾರ್ಟ್ ವಾಚ್ಗಳು, ವೈರ್ಲೆಸ್ ಆಡಿಯೊ ಸಾಧನಗಳು, ಗೋಡೆ ಗಡಿಯಾರಗಳು ಮತ್ತು ಸುಗಂಧ ದ್ರವ್ಯಗಳನ್ನು ಸಹ ಹೊಂದಿದೆ.
ವಿಶೇಷ ಉದ್ಘಾಟನಾ ಕೊಡುಗೆಯಾಗಿ ಫೆಬ್ರವರಿ 9 ರಿಂದ ಫೆಬ್ರವರಿ 12 ರವರೆಗೆ ವಾಚ್ಗಳ ಮೇಲೆ 10% ವಿಶೇಷ ರಿಯಾಯಿತಿಗಳನ್ನು ನೀಡಲಾಗುತ್ತದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
ಹೆಲಿಯೊಸ್ ಮತ್ತು ಟೈಟನ್ ವರ್ಲ್ಡ್
ಸಿಪಿಸಿ ಪ್ಲಾಜಾ, ಮೈತ್ರಿ ಕಾಂಪ್ಲೆಕ್ಸ್ ಎದುರು, ಕೆ.ಎಂ ಮಾರ್ಗ ಮುಖ್ಯ ರಸ್ತೆ
ಉಡುಪಿ – 576101
Ph: 0820- 2535123