ಶ್ರೀ ಮುದ್ರಾಡಿ ಅವರಿಗೆ 2022 ನೇ ಸಾಲಿನ “ಸಾರಾ ದತ್ತಿ ಪ್ರಶಸ್ತಿ”

ನಿಟ್ಟೆ: ಲೇಖಕಿ, ಕವಯಿತ್ರಿ ಶ್ರೀ ಮುದ್ರಾಡಿಯವರ ಚೊಚ್ಚಲ ಕವನ ಸಂಕಲನ ‘ಇಲ್ಲಗಳ ನಡುವೆ’ 2022 ನೇ ಸಾಲಿನ ರಾಜ್ಯಮಟ್ಟದ “ಸಾರಾ ದತ್ತಿ ಪ್ರಶಸ್ತಿ”ಯನ್ನು ಪಡೆದುಕೊಂಡಿದೆ. ಅವಿಭಜಿತ ದಕ್ಷಿಣ ಕನ್ನಡ ಮತ್ತು ಕಾಸರಗೋಡು ಜಿಲ್ಲೆಗಳನ್ನೊಳಗೊಂಡ ಕರಾವಳಿ ಲೇಖಕಿಯರ ವಾಚಕಿಯರ ಸಂಘದಿಂದ ಸಾರಾ ಅಬೂಬಕ್ಕರ್ ಅವರ ಹೆಸರಿನಲ್ಲಿ ಕೊಡಮಾಡುವ ಈ ಪ್ರಶಸ್ತಿಯನ್ನು ಇತ್ತೀಚೆಗೆ ಮಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ಪ್ರದಾನ ಮಾಡಲಾಯಿತು.