ಆಮ್ಸ್ಟರ್ಡ್ಯಾಮ್: ಫೆಬ್ರವರಿ 3 ರಂದು ನೆದರ್ಲ್ಯಾಂಡಿನ ಸಂಶೋಧಕ ಫ್ರಾಂಕ್ ಹೂಗರ್ಬೀಟ್ಸ್ ತಮ್ಮ ಟ್ವೀಟ್ ನಲ್ಲಿ 7.5 ಕ್ಕಿಂತ ಹೆಚ್ಚು ತೀವ್ರತೆಯ ಭೂಕಂಪವು ಈ ಪ್ರದೇಶವನ್ನು ಅಪ್ಪಳಿಸುತ್ತದೆ ಎಂದು ಭವಿಷ್ಯ ನುಡಿದಿದ್ದರು. ಮೂರು ದಿನಗಳ ಬಳಿಕ ಅವರ ಭವಿಷ್ಯ ನಿಜವಾಗಿದ್ದು, ಸೋಮವಾರದಂದು ಭಾರಿ ಭೂಕಂಪವು ಟರ್ಕಿ ಮತ್ತು ಸಿರಿಯಾದಲ್ಲಿ ಸಾವಿರಾರು ಜನರನ್ನು ಬಲಿತೆಗೆದುಕೊಂಡಿತು.
ಅಷ್ಟೇ ಅಲ್ಲ. ಫ್ರಾಂಕ್ ತಮ್ಮ ಸಂಶೋಧನಾ ಏಜೆನ್ಸಿಯ ಪೋಸ್ಟ್ ಅನ್ನು ಮರುಟ್ವೀಟ್ ಮಾಡಿದ್ದರು. ಅದರಲ್ಲಿ ಮೊದಲನೆಯ ಭೂಕಂಪವನ್ನು ಅನುಸರಿಸಿ ದೊಡ್ಡ ಭೂಕಂಪನ ನಡೆಯಲಿದೆ ಎಂದು ಅಂದಾಜಿಸಿದ್ದರು. ಅದು ಕೂಡಾ ನಿಜವಾಯಿತು.
Sooner or later there will be a ~M 7.5 #earthquake in this region (South-Central Turkey, Jordan, Syria, Lebanon). #deprem pic.twitter.com/6CcSnjJmCV
— Frank Hoogerbeets (@hogrbe) February 3, 2023
ಫ್ರಾಂಕ್ ಹೂಗರ್ಬೀಟ್ಸ್, ಭೂಕಂಪನ ಚಟುವಟಿಕೆಯನ್ನು ಅಧ್ಯಯನ ಮಾಡುವ ಸೋಲಾರ್ ಸಿಸ್ಟಮ್ ಜಿಯೋಮೆಟ್ರಿಕ್ ಸರ್ವೆ (SSGEOS) ಸಂಸ್ಥೆಯೊಂದಿಗೆ ಸಂಶೋಧನಾ ನಿರತರಾಗಿದ್ದಾರೆ. ಭವಿಷ್ಯ ನಿಜವಾದ ನಂತರ ಹೂಗರ್ಬೀಟ್ಸ್ ತಮ್ಮ ದುಃಖವನ್ನು ವ್ಯಕ್ತಪಡಿಸಿದ್ದಾರೆ. “ಮಧ್ಯ ಟರ್ಕಿಯಲ್ಲಿ ಸಂಭವಿಸಿದ ಪ್ರಮುಖ ಭೂಕಂಪದಿಂದ ಬಾಧಿತರಾದ ಪ್ರತಿಯೊಬ್ಬರಿಗೂ ನನ್ನ ಹೃದಯವು ಮಿಡಿಯುತ್ತಿದೆ. ನಾನು ಮೊದಲೇ ಹೇಳಿದಂತೆ, 115 ಮತ್ತು 526 ವರ್ಷಗಳ ಹಿಂದಿನಂತೆ ಈ ಪ್ರದೇಶದಲ್ಲಿ ಬೇಗ ಅಥವಾ ನಂತರ ಇದು ಸಂಭವಿಸುತ್ತದೆ. ಈ ಭೂಕಂಪಗಳು ಯಾವಾಗಲೂ ನಿರ್ಣಾಯಕ ಗ್ರಹಗಳ ರೇಖಾಗಣಿತದಿಂದ ಮುಂಚಿತವಾಗಿರುತ್ತವೆ. ನಾವು ಫೆಬ್ರವರಿ 4-5 ರಂದು ಈ ಜ್ಯಾಮಿತಿಯನ್ನು ಹೊಂದಿದ್ದೇವೆ” ಎಂದು ಅವರು ಟ್ವೀಟ್ ಮಾಡಿದ್ದಾರೆ.
ಭೂಕಂಪಶಾಸ್ತ್ರಜ್ಞರು ವಾಡಿಕೆಯಂತೆ ಫ್ರಾಂಕ್ ಕೆಲಸವನ್ನು ತಪ್ಪುದಾರಿಗೆಳೆಯುವ ಮತ್ತು ಅವೈಜ್ಞಾನಿಕ ಎಂದು ತಳ್ಳಿಹಾಕಿದ್ದಾರೆ. ಭೂಕಂಪಗಳನ್ನು ಮುನ್ಸೂಚಿಸಲು ಯಾವುದೇ ನಿಖರವಾದ ವಿಧಾನವಿಲ್ಲ ಎಂದು ಅವರು ವಾದಿಸಿದ್ದಾರೆ.
ಈ ವ್ಯಕ್ತಿ ಚಂದ್ರನ ಮತ್ತು ಗ್ರಹಗಳ ರೇಖಾಗಣಿತದ ಮಾದರಿಗಳ ಆಧಾರದ ಮೇಲೆ ಭೂಕಂಪಗಳನ್ನು ಊಹಿಸುತ್ತಿದ್ದಾನೆ ಮತ್ತು ಅವನ ಅನೇಕ ಭವಿಷ್ಯವಾಣಿಗಳು ಸುಳ್ಳಾಗಿವೆ. ಕೆಲವೊಂದು ನಿರ್ದಿಷ್ಟವಾಗಿ ಟರ್ಕಿ/ಸಿರಿಯಾ ಗಡಿಯಲ್ಲಿನ ಈ ಇತ್ತೀಚಿನ ಒಂದು ಊಹೆ ಮಾತ್ರ ವಿಲಕ್ಷಣವಾಗಿ ನಿಖರವಾಗಿತ್ತು. ಮುನ್ಸೂಚನೆಯ ನಿಖರತೆಯನ್ನು ನೋಡುತ್ತಿದ್ದೇನೆ, ಆದರೂ ಊಹೆ ಅಷ್ಟು ನಿಖರವಾಗಿಲ್ಲ ಎಂದು ಡಾ. ಹೈಲ್ಯಾಂಡರ್ ಹೇಳಿದ್ದಾರೆ.
This guy has been predicting earthquakes based on lunar & planetary geometry models & though many of his predictions have come up empty, a few, in particular this recent one in the Turkish/Syrian border was eerily accurate. Still looking at prediction accuracy; looks quite low. https://t.co/EbFCvmMNGA
— Dr Hyelander 🇦🇲 🌋 (@Helioprogenus) February 6, 2023
SSGEOS ಪ್ರಕಾರ ಫೆ-10 ರಿಂದ 18 ರ ಮಧ್ಯೆ ನೇಪಾಳ-ಭಾರತ-ಪಾಕಿಸ್ಥಾನ-ಅಪಘಾನಿಸ್ಥಾನ ಗಡಿ, ಬಾಂಗ್ಲಾ-ಮಯನಮಾರ್, ಟಿಬೆಟ್-ಚೀನಾ ಗಡಿಗಳಲ್ಲಿ ಸಾಮಾನ್ಯದಿಂದ ಮಧ್ಯಮ(4.0-7.0) ಭೂಕಂಪನಗಳು ಆಗುವ ಸಾಧ್ಯತೆ ಇದೆ ಎಂದು ಹೇಳಿದೆ.