ಫೆ.5 ರಂದು ಶಿವಪಾಡಿಯಲ್ಲಿ ಶಾಲಾ ಮಕ್ಕಳಿಗಾಗಿ ಶಿವ ಚಿತ್ತಾರ

ಮಣಿಪಾಲ: ಶ್ರೀ ಉಮಾಮಹೇಶ್ವರ ದೇವಸ್ಥಾನ ಅಭಿವೃದ್ದಿ ಟ್ರಸ್ಟ್ ವತಿಯಿಂದ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ಚಿತ್ರಕಲಾ ಸ್ಪರ್ಧೆ ‘ಶಿವಚಿತ್ತಾರ’ ವನ್ನು ಫೆ.5 ರಂದು ಬೆಳಿಗ್ಗೆ 9 ರಿಂದ 12 ಗಂಟೆವರೆಗೆ ಶ್ರೀ ಉಮಾಮಹೇಶ್ವರ ದೇವಸ್ಥಾನಲ್ಲಿ ಆಯೋಜಿಸಲಾಗಿದೆ.

ಸ್ಪರ್ಧಾ ನಿಯಮ:

1 ಮತ್ತು 5 ನೇ ತರಗತಿಗೆ ಐಛ್ಛಿಕ ವಿಷಯ
7 ಮತ್ತು 8 ನೇ ತರಗತಿಗೆ ಐಛ್ಛಿಕ ವಿಷಯ
9 ಮತ್ತು 10 ನೇ ತರಗತಿಗೆ ತಾಂಡವ ಶಿವ, ಶಾಂತ ಶಿವ ರುದ್ರ ಶಿವ ವಿಷಯ

ವಿಜೇತರಿಗೆ ಆಕರ್ಷಕ ನಗದು ಬಹುಮಾನಗಳು ಮತ್ತು ಭಾಗವಹಿಸಿದವರಿಗೆ ಹತ್ತು ಸಮಾಧಾನಕರ ಬಹುಮಾನಗಳಿವೆ.