ಧೋನಿ ಎಂಟರ್‌ಟೈನ್‌ಮೆಂಟ್‌ನ ಮೊದಲ ತಮಿಳು ಚಿತ್ರ ‘ಲೆಟ್ಸ್ ಗೆಟ್ ಮ್ಯಾರೀಡ್’ ಟೈಟಲ್ ಬಿಡುಗಡೆ

ತಮ್ಮ ಮೊದಲ ತಮಿಳು ಚಲನಚಿತ್ರವನ್ನು ಬಿಡುಗಡೆ ಮಾಡುವ ಘೋಷಣೆ ಮಾಡಿದ ಮೂರು ತಿಂಗಳ ನಂತರ, ಧೋನಿ ಎಂಟರ್‌ಟೈನ್‌ಮೆಂಟ್ ಚಿತ್ರದ ಟೈಟಲ್ ಮತ್ತು ತಾರಾಗಣದ ವಿವರವನ್ನು ಬಹಿರಂಗಪಡಿಸಿದೆ.

ಜನವರಿ 27 ರಂದು (ಶುಕ್ರವಾರ), ಭಾರತದ ಮಾಜಿ ನಾಯಕ ಎಂಎಸ್ ಧೋನಿ ಒಡೆತನದ ಎಂಟರ್‌ಟೈನ್‌ಮೆಂಟ್ ಕಂಪನಿಯು ಚಿತ್ರದ ಶೀರ್ಷಿಕೆ ‘ಎಲ್‌ಜಿಎಂ – ಲೆಟ್ಸ್ ಗೆಟ್ ಮ್ಯಾರೀಡ್’ ಅನ್ನು ಅನಾವರಣಗೊಳಿಸಿತು. ಚಿತ್ರದ ನಿರ್ಮಾಪಕಿ ಸಾಕ್ಷಿ ಧೋನಿ ಟೈಟಲ್ ಅನ್ನು ಅನಾವರಣಗೊಳಿಸಿದರು.

Image

ಚಿತ್ರದಲ್ಲಿ ಹರೀಶ್ ಕಲ್ಯಾಣ್ ಮತ್ತು ಇವಾನಾ ಮುಖ್ಯ ಪಾತ್ರದಲ್ಲಿ ನಟಿಸಲಿದ್ದು, ಖ್ಯಾತ ನಿರ್ದೇಶಕ ರಮೇಶ್ ತಮಿಳ್ಮಣಿ ನಿರ್ದೇಶಿಸಲಿದ್ದಾರೆ.

Image

 

ಧೋನಿ ಎಂಟರ್‌ಟೈನ್‌ಮೆಂಟ್‌ ಪ್ರೈ.ಲಿ ತನ್ನ ಪತ್ರಿಕಾ ಪ್ರಕಟಣೆಯಲ್ಲಿ, ತಮಿಳುನಾಡಿನ ಜನರೊಂದಿಗೆ ಧೋನಿ ಹಂಚಿಕೊಳ್ಳುವ ಅಸಾಧಾರಣ ಬಾಂಧವ್ಯಕ್ಕೆ ಸಾಟಿಯಿಲ್ಲ. ಈ ಹೆಚ್ಚುವರಿ ವಿಶೇಷ ಸಂಬಂಧವನ್ನು ಮತ್ತಷ್ಟು ಬಲಪಡಿಸುವ ಮೂಲಕ, ಧೋನಿ ಎಂಟರ್‌ಟೈನ್‌ಮೆಂಟ್ ತನ್ನ ಮೊದಲ ಚಲನಚಿತ್ರವನ್ನು ತಮಿಳಿನಲ್ಲಿ ನಿರ್ಮಿಸಲಿದೆ. ಧೋನಿ ಎಂಟರ್‌ಟೈನ್‌ಮೆಂಟ್‌ನ ಎಂಡಿ ಸಾಕ್ಷಿ ಸಿಂಗ್ ಧೋನಿ ಅವರ ಪರಿಕಲ್ಪನೆಯ ಫ್ಯಾಮಿಲಿ ಎಂಟರ್‌ಟೈನರ್ ಇದಾಗಲಿದೆ ಎಂದಿದೆ.

ಕಂಪನಿಯು ತನ್ನ ಚಲನಚಿತ್ರ ನಿರ್ಮಾಣವನ್ನು ತಮಿಳಿನ ಹೊರಗೆ ತೆಲುಗು ಮತ್ತು ಮಲಯಾಳಂನಂತಹ ದಕ್ಷಿಣ ಭಾರತದ ಇತರ ಭಾಷೆಗಳಿಗೆ ವಿಸ್ತರಿಸಲು ಯೋಜಿಸುತ್ತಿದೆ. ವಿಶೇಷವೆಂದರೆ ಎಲ್ಲರೂ ಬಾಲಿವುಡ್ ನಲ್ಲಿ ಕಾಣಿಸಿಕೊಳ್ಳಲು ಹವಣಿಸುತ್ತಿರುವಾಗ ಇದಕ್ಕೆ ವಿಪರೀತವಾಗಿ ಧೋನಿ, ದಕ್ಷಿಣ ಭಾರತೀಯ ಭಾಷೆಗಳಲ್ಲಿ ಚಿತ್ರಗಳನ್ನು ನಿರ್ಮಾಣ ಮಾಡಲು ಒಲವು ತೋರಿದ್ದಾರೆ. ಧೋನಿ ಸ್ವತಃ ಉತ್ತರ ಭಾರತೀಯರಾಗಿದ್ದರೂ ಕೂಡಾ ತಮಗೆ ಪ್ರೀತಿ ಆದರವನ್ನು ನೀಡುತ್ತಿರುವ ತಮಿಳುನಾಡಿನ ಮತ್ತು ದಕ್ಷಿಣ ಭಾರತೀಯ ಭಾಷೆಗಳತ್ತ ಚಿತ್ತ ಹರಿಸಿರುವುದು ಉತ್ತರ-ದಕ್ಷಿಣ ಭಾಷಾ ಬೇಧವೆಂಬ ಸುಳ್ಳಿನ ಪರದೆಯನ್ನು ಹರಿದಿದೆ.