ಬ್ರಹ್ಮಾವರ: ಬದುಕಿನಲ್ಲಿ ಏನೇನೋ ಸಾಧನೆ ಮಾಡಬೇಕೆಂದು ಕನಸು ಕಂಡ ಕಾರ್ತಿಕ್ ಉದಯೋನ್ಮುಖ ರಂಗಭೂಮಿ ನಟ. ಬಣ್ಣದ ಬದುಕಿನ ರಂಗಭೂಮಿಯಲ್ಲಿ ಹಲವಾರು ನಾಟಕ ಮತ್ತು ಕಿರುಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದ ಕಾರ್ತಿಕ್ ಇಂದು ಬಣ್ಣ ಕಳಚಿಟ್ಟು ಬಾರದ ಲೋಕಕ್ಕೆ ಪಯಣಿಸಿದ್ದಾರೆ.
31 ರ ಹರೆಯದ ಕಾರ್ತಿಕ್ ಜ.22ರಂದು ನಿಧನರಾಗಿದ್ದು, ತಾಯಿ ಮತ್ತು ಸಹೋದರನನ್ನು ಅಗಲಿದ್ದಾರೆ.
ಮನುಹಂದಾಡಿಯವರ ತಂಡದಲ್ಲಿ ಗುರುತಿಸಿಕೊಂಡಿದ್ದ ಇವರು ಹಲವಾರು ಹಾಸ್ಯ ವೀಡಿಯೋಗಳಲ್ಲಿ, ನಾಟಕಗಳಲ್ಲಿ ಹಾಗೂ ಕಿರುಚಿತ್ರಗಳಲ್ಲಿ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಿದ್ದರು. ಅರೆಹೊಳೆ ಪ್ರತಿಷ್ಠಾನದಲ್ಲಿಯೂ ಕಾರ್ತಿಕ್ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಸಿನಿಮಾ ಕ್ಷೇತ್ರದಲ್ಲಿಯೂ ಸಾಧನೆ ಮಾಡಬೇಕೆಂಬ ಹಂಬಲ ಹೊಂದಿದ್ದರು.
ಆದರೆ ವಿಧಿ ವಿಲಾಸವೇ ಬೇರೆ ಇತ್ತು. ಕುಟುಂಬಕ್ಕೆ ಆಧಾರವಾಗಿದ್ದ ಏಕೈಕ ಸ್ಥಂಭ ಇಂದು ಕುಟುಂಬದ ಜೊತೆಗಿಲ್ಲ. ಇತರರ ಕಷ್ಟಕ್ಕೆ ನೆರವಾಗುತ್ತಿದ್ದ ಕಾರ್ತಿಕ್ ಕುಟುಂಬವೇ ಇಂದು ಸಂಕಷ್ಟದಲ್ಲಿ ಸಿಲುಕಿದ್ದು, ಸಹೃದಯರ ಸಹಾಯದ ನಿರೀಕ್ಷೆಯಲ್ಲಿದೆ. ಕುಟುಂಬಕ್ಕೆ ಆರ್ಥಿಕ ಸಹಾಯ ಮಾಡಬಯಸುವವರು ಗೂಗಲ್ ಪೇ 919008024646 ಅಥವಾ Bharathi R, AC/no- 01122200015665 IFSC:CNRB0010112 Brahmavar Branch ಇಲ್ಲಿಗೆ ಹಣ ಕಳುಹಿಸಬಹುದು.