ಮಾಂಟೆರೆ ಪಾರ್ಕ್: ಟೆಕ್ಸಾಸ್ನ ಪ್ರಾಥಮಿಕ ಶಾಲೆಯಲ್ಲಿ 19 ಮಕ್ಕಳು ಮತ್ತು ಇಬ್ಬರು ಶಿಕ್ಷಕರನ್ನು ಕೊಂದ ಉವಾಲ್ಡೆ ಹತ್ಯಾಕಾಂಡದ ನಂತರದ ಅತಿ ದೊಡ್ಡ ಸಾಮೂಹಿಕ ಹತ್ಯೆ ಲಾಸ್ ಏಂಜಲೀಸ್ ಅನ್ನು ಬೆಚ್ಚಿ ಬೀಳಿಸಿದೆ.
ಲಾಸ್ ಏಂಜಲೀಸ್ನ ಏಷ್ಯಾದ ಅಮೆರಿಕದ ಉಪನಗರವಾದ ಮಾಂಟೆರಿ ಪಾರ್ಕ್ನ ನಿವಾಸಿಗಳಿಗೆ “ಇಯರ್ ಆಫ್ ರ ರಾಬಿಟ್” ಭಾನುವಾರದಂದು ಭಯಾನಕವಾಗಿ ಆರಂಭವಾಗಿದೆ. ಇಲ್ಲಿನ ಸಾಮೂಹಿಕ ಗುಂಡಿನ ದಾಳಿಯಲ್ಲಿ 10 ಜನರು ಸಾವನ್ನಪ್ಪಿ, ಇನ್ನುಳಿದ ಹಲವರು ಗಾಯಗೊಂಡಿದ್ದಾರೆ.
60,000 ಜನರಿರುವ ಈ ನಗರದಲ್ಲಿ, ಚಾಂದ್ರಮನ ಹೊಸ ವರ್ಷವನ್ನು ಆಚರಿಸುತ್ತಿದ್ದ ಚೀನೀ ನಾಗರಿಕರ ಮೇಲೆ ಏಷ್ಯಾ ಮೂಲದ ವ್ಯಕ್ತಿಯೊಬ್ಬ ಗುಂಡಿನ ಮಳೆಗರೆದಿದ್ದಾನೆ.
ಶಾಂತವಾಗಿರುವ ಈ ಪ್ರದೇಶಲ್ಲಿ ಇಂತಹ ಘಟನೆಗಳು ನಡೆಯುವುದಿಲ್ಲ ಎಂದಿರುವ ಹಿರಿಯ ಮಹಿಳೆ ವೈನ್ ಲಿಯಾವ್, 57 ವರ್ಷದ ನಿವೃತ್ತ ಪಶುವೈದ್ಯೆಯಾಗಿದ್ದು ಕಳೆದ ನಾಲ್ಕು ದಶಕಗಳಿಂದ ಮಾಂಟೆರಿ ಪಾರ್ಕ್ನಲ್ಲಿ ವಾಸಿಸುತ್ತಿದ್ದಾರೆ. ತಾನು ನಿತ್ಯ ಶಾಪಿಂಗ್ ಗೆ ಪ್ರಯಾಣಿಸುವ ಈ ಜಾಗದಲ್ಲಿ ಈ ರೀತಿಯ ಭಯಾನಕ ಕೃತ್ಯ ನಡೆದಿರುವುದನ್ನು ಆಕೆಗೆ ನಂಬಲು ಸಾಧ್ಯವಾಗುತ್ತಿಲ್ಲ.
ಶನಿವಾರ ರಾತ್ರಿ, ಬಂದೂಕುಧಾರಿಯು ಬಾಲ್ ರೂಂಗೆ ಪ್ರವೇಶಿಸಿ ಐದು ಪುರುಷರು ಮತ್ತು ಐದು ಮಹಿಳೆಯರನ್ನು ಕೊಂದರು ಮತ್ತು ಕನಿಷ್ಠ 10 ಮಂದಿ ಗಾಯಗೊಂಡರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಡೌನ್ಟೌನ್ ಲಾಸ್ ಏಂಜಲೀಸ್ನ ಪೂರ್ವಕ್ಕೆ ಕೆಲವೇ ಮೈಲುಗಳಷ್ಟು ದೂರದಲ್ಲಿರುವ ಮಾಂಟೆರಿ ಪಾರ್ಕ್ ಅನ್ನು ನಗರದ “ಹೊಸ ಚೈನಾಟೌನ್” ಎಂದೇ ಪರಿಗಣಿಸಲಾಗುತ್ತದೆ. ಇಲ್ಲಿನ ನಿವಾಸಿಗಳು ಮ್ಯಾಂಡರಿನ್ನಲ್ಲಿ ದಿನಪತ್ರಿಕೆಗಳನ್ನು ಓದುತ್ತಾರೆ, ಹೆಚ್ಚಿನ ವ್ಯಾಪಾರ ಚಿಹ್ನೆಗಳು ಚೈನೀಸ್ನಲ್ಲಿವೆ ಮತ್ತು ಹೆಚ್ಚಿನ ನಿವಾಸಿಗಳು ಇಂಗ್ಲಿಷ್ ಮಾತನಾಡುವುದಿಲ್ಲ.
ಅಮೇರಿಕಾ ಸಂಸ್ಥಾನದ ಹಲವಾರು ರಾಜ್ಯಗಳಲ್ಲಿ ನಿತ್ಯವೆಂಬಂತೆ ನಾಗರಿಕರನ್ನು ಗುರಿಯಾಗಿಸಿ ಗುಂದಿನ ದಾಳಿಗಳು ನಡೆಯುತ್ತಿರುವುದು ಇಲ್ಲಿನ ಅನಿವಾಸಿ ಅಮೆರಿಕನ್ನರಲ್ಲಿ ದುಃಖ ಮತ್ತು ಆತಂಕವನ್ನುಂತುಮಾಡಿದೆ.