ಮೂರು ದಿನಗಳ ಬೀಚ್ ಉತ್ಸವಕ್ಕೆ ಸಂಭ್ರಮದ ತೆರೆ

ಮಲ್ಪೆ: ಭಾನುವಾರ ಮಲ್ಪೆ ಕಡಲತೀರದಲ್ಲಿ ಮುಕ್ತಾಯಗೊಂಡ ಎರಡು ದಿನಗಳ ಬೀಚ್ ಉತ್ಸವದಲ್ಲಿ ಉಡುಪಿ ಮತ್ತು ಸುತ್ತಮುತ್ತಲಿನ ಸ್ಥಳೀಯರು ಮತ್ತು ಪ್ರಯಾಣಿಕರು ಭರ್ಜರಿಯಾಗಿಯೆ ಪಾಲ್ಗೊಂಡರು.

ಉತ್ಸವ ಪ್ರಯುಕ್ತ ಶ್ವಾನ ಪ್ರದರ್ಶನದಲ್ಲಿ ವಿವಿಧ ತಳಿಯ ತಳಿಗಳು ನೋಡುಗರನ್ನು ಆಕರ್ಷಿಸಿದವು. ಡ್ಯಾಷ್‌ಹಂಡ್‌ನಿಂದ ಹಿಡಿದು ಬಾರ್ನ್ಯಾರ್ಡ್, ಗೋಲ್ಡನ್ ರಿಟ್ರೈವರ್, ಡಾಲ್ಮೇಷಿಯನ್, ಡೋಬರ್‌ಮ್ಯಾನ್, ಲ್ಯಾಬ್ರಡಾರ್, ಗ್ರೇಟ್ ಡೇನ್, ಜರ್ಮನ್ ಶೆಫರ್ಡ್ ಮತ್ತು ಇತರ ವಿವಿಧ ತಳಿಗಳು ನೋಡುಗರನ್ನು ಮಂತ್ರಮುಗ್ಧಗೊಳಿಸಿದವು. ಉತ್ಸವದಲ್ಲಿ ಗಾಳಿಪಟ ಹಾರಿಸುವುದು ಮತ್ತೊಂದು ಪ್ರಮುಖ ಆಕರ್ಷಣೆಯಾಗಿತ್ತು. ತುಳುನಾಡಿನ ಸಂಪ್ರದಾಯ, ಸಂಸ್ಕೃತಿಯನ್ನು ಬಿಂಬಿಸುವ ವಿವಿಧ ಬಗೆಯ ಗಾಳಿಪಟಗಳು ಗಾಳಿಯಲ್ಲಿ ಹಾರಾಡಿದವು.

ಬಾಯಲ್ಲಿ ನೀರೂರಿಸುವ ತಿನಿಸುಗಳಾದ ಮೀನು ಫ್ರೈ, ಚಿಕನ್ ಸುಕ್ಕ, ಸಿಗಡಿ ಚಟ್ನಿ, ಚಿಕನ್ ಕಬಾಬ್, ಮಾರ್ವಾಯೀ ಸುಕ್ಕ, ಕೋಳಿ ರೊಟ್ಟಿ ಮುಂತಾದ ಖಾದ್ಯಗಳ ಆಹಾರ ಮಳಿಗೆಗಳ ಮುಂದೆ ಜನಜಂಗುಳಿ ಸೇರಿತ್ತು.

ಕಡಲತೀರದ ವಾಲಿಬಾಲ್, ಥ್ರೋ ಬಾಲ್, ಬೀಚ್ ಕಬ್ಬಡಿ, ಕಡಲತೀರದಲ್ಲಿ ಸೈಕಲ್ ರೇಸ್, ಹಗ್ಗಜಗ್ಗಾಟ, ಫೋಟೋ ಎಕ್ಸ್ ಪೋ, ಪೇಂಟಿಂಗ್ ಎಕ್ಸ್‌ಪೋ ಮುಂತಾದ ಹವಾರು ಮನೋರಂಜನಾ ಕಾರ್ಯಕ್ರಮಗಳು ಜನರನ್ನು ರಂಜಿಸಿದವು.

ಕುನಾಲ್ ಗಾಂಜಾವಾಲ ಸಂಗೀತ ರಸಮಂಜರಿಯು ಜನರನ್ನು ಆಕರ್ಷಿಸಿತು.