ಮಾರುಕಟ್ಟೆಗೆ ಬರಲಿದೆ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎ 14 5ಜಿ: ಕೈಗೆಟುಕುವ ಬೆಲೆಯಲ್ಲಿ ಶಕ್ತಿಯುತ ಕಾರ್ಯಕ್ಷಮತೆ

2023 ರಲ್ಲಿ ಸ್ಯಾಮ್‌ಸಂಗ್ ತನ್ನ ಮೊದಲ ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ. ದಕ್ಷಿಣ ಕೊರಿಯಾದ ಬಹುರಾಷ್ಟ್ರೀಯ ಉತ್ಪಾದನಾ ಸಮೂಹಕ್ಕೆ ತನ್ನ 5ಜಿ ಮಾದರಿ ಫೋನ್ ಗಳನ್ನು ವಿಸ್ತರಿಸಲು ಇದು ಸಹಾಯ ಮಾಡುತ್ತದೆ. ಇದೀಗ ಗ್ಯಾಲಕ್ಸಿ ಎ ಸರಣಿಯಲ್ಲಿ ಹೊಸ ಪ್ರವೇಶ ಪಡೆದಿರುವ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎ 14 5ಜಿ ಇಂದು ಬಿಡುಗಡೆಯಾಗುತ್ತಿದೆ.

ವೈಶಿಷ್ಟ್ಯಗಳು:
ಸ್ಯಾಮ್‌ಸಂಗ್ ಗ್ಯಾಲಕ್ಸಿ ಎ 14 5ಜಿ ಇದು 6.6-ಇಂಚಿನ ಪೂರ್ಣ ಎಚ್.ಡಿ+ ಡಿಸ್ಪ್ಲೇಯನ್ನು ಹೊಂದಿದ್ದು ಅದು 90ಹರ್ಟ್ಜ್ ರಿಫ್ರೆಶ್ ದರವನ್ನು ನೀಡುತ್ತದೆ. ಸಾಧನವು ಆಕ್ಟಾ-ಕೋರ್ ಪ್ರೊಸೆಸರ್‌ನೊಂದಿಗೆ ಬರುವ ನಿರೀಕ್ಷೆಯಿದ್ದು, ಎರಡು ತಲೆಮಾರುಗಳ ಒ.ಎಸ್ ನವೀಕರಣಗಳನ್ನು ಮತ್ತು ನಾಲ್ಕು ವರ್ಷಗಳವರೆಗೆ ಭದ್ರತಾ ನವೀಕರಣಗಳನ್ನು ಪಡೆಯುತ್ತದೆ ಎಂದು ದೃಢಪಡಿಸಲಾಗಿದೆ.

ಕ್ಯಾಮರಾ:
ಸ್ಯಾಮ್‌ಸಂಗ್‌ನ ಮುಂಬರುವ 5ಜಿ ಸ್ಮಾರ್ಟ್‌ಫೋನ್ ಹಿಂಭಾಗದಲ್ಲಿ ಟ್ರಿಪಲ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿರುತ್ತದೆ. ಸೆಟಪ್ 50-ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾವನ್ನು ಒಳಗೊಂಡಿದೆ. ಇನ್ನೆರಡು ಕ್ಯಾಮೆರಾಗಳು ತಲಾ 2 ಎಂಪಿ ಇರಲಿದೆ, ಮುಂಭಾಗದಲ್ಲಿ, ಸೆಲ್ಫಿಗಳಿಗಾಗಿ ಪಂಚ್-ಹೋಲ್ 13ಎಂಪಿ ಕ್ಯಾಮೆರಾ ಇರುತ್ತದೆ.

ಬ್ಯಾಟರಿ:
ಫೋನ್ 15W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುವ 5000mAh ಬ್ಯಾಟರಿಯೊಂದಿಗೆ ಬರುತ್ತದೆ.

ಬೆಲೆ:
ಬೆಲೆ 15,000 ರಿಂದ 20,000 ರೂ.

ಸ್ಯಾಮ್‌ಸಂಗ್ ಕಂಪನಿ ತನ್ನ ಗ್ಯಾಲಕ್ಸಿ ಎ23 5ಜಿ ಅನ್ನು ಬಿಡುಗಡೆ ಮಾಡಲಿದೆ ಎಂಬ ವರದಿಗಳಿವೆ. ಕಂಪನಿಯ ಗ್ಯಾಲಕ್ಸಿ ಎ ಸರಣಿಯು ಕೈಗೆಟುಕುವ ಬೆಲೆಯಲ್ಲಿ ಶಕ್ತಿಯುತ ಕಾರ್ಯಕ್ಷಮತೆ ಮತ್ತು ನವೀನ ವೈಶಿಷ್ಟ್ಯಗಳನ್ನು ತರಲು ಹೆಸರುವಾಸಿಯಾಗಿದೆ. ಈ ಹೊಸ ಮಾದರಿಗಳು ಕಂಪನಿಯು ಈ ವರ್ಷ ದೇಶದಲ್ಲಿ ತನ್ನ ನಾಯಕತ್ವವನ್ನು ಕ್ರೋಢೀಕರಿಸಲು ಸಹಾಯ ಮಾಡಲಿದೆ.