ಆನಗಳ್ಳಿ ಶ್ರೀ ದತ್ತಾಶ್ರಮದಲ್ಲಿ ಗಿಡ ವಿತರಣೆ, ಸ್ವಚ್ಚತಾ ಕಾರ್ಯಕ್ರಮ

ಕುಂದಾಪುರ: ವಾತಾವರಣ ಸರಿಯಿಲ್ಲ ಎಂದು ಆ ಬಗ್ಗೆ ಪ್ರತಿಭಟನೆ, ಪ್ರತಿಪಾದನೆ ಮಾಡುವ ಮೊದಲು ಜನಕ್ಕೊಬ್ಬರು ಗಿಡ ನೆಡುವ ಕಾರ್ಯವಾಗಬೇಕು. ಮೊದಲು ಪರಿಸರ ಕಾಳಜಿಯನ್ನು ನಾವುಗಳು ಅರಿಯಬೇಕು. ಮನೆಯಲ್ಲಿನ ಶುಭ ಕಾರ್ಯ ಸಂದರ್ಭ ಗಿಡ ವಿತರಣೆ, ಅಶಕ್ತರಿಗೆ ಸಹಕಾರ ಮಾಡುವ ಕೆಲಸವಾಗಬೇಕು,  ಎಂದು ಶೃಂಗೇರಿ ಗೌರಿಗದ್ದೆಯ ದತ್ತಾಶ್ರಮದ ಅವಧೂತ ವಿನಯ ಗುರೂಜಿಯವರು ಹೇಳಿದರು.

ಕುಂದಾಪುರದ ಆನಗಳ್ಳಿಯಲ್ಲಿರುವ ಶ್ರೀ ದತ್ತಾಶ್ರಮದಲ್ಲಿ ಶನಿವಾರ ಸಂಜೆ ಸಾರ್ವಜನಿಕರು ಮತ್ತು ಭಕ್ತರಿಗೆ ಗಿಡಗಳನ್ನು ವಿತರಿಸಿ ಅವರು ಮಾತನಾಡಿದರು.

ಪ್ರಕೃತಿ ಪೂಜೆಯೇ ನಿಜವಾದ ದೇವರ ಆರಾಧನೆ. ದೇವರನ್ನು ನಂಬುವ ಜೊತೆಗೆ ದೇಹ ಮತ್ತು ಪ್ರಕೃತಿಯನ್ನು ನಂಬಬೇಕಿದೆ. ಜಗತ್ತಿಗೆ ಬೇಕಾದ ಅಗತ್ಯತೆಗಳನ್ನು ಮೊದಲು ನಾವುಗಳು ಅರಿಯಬೇಕಿದೆ. ಜಾತಿ ಪದ್ಧತಿಯನ್ನು ಹೊಗಲಾಡಿಸಿ ದೇಶವನ್ನು ಸರಿಪಡಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬ ವ್ಯಕ್ತಿಯ ಚಿಂತನೆಗಳು ಬದಲಾಗುವದರೊಂದಿಗೆ ನೂತನ ಆವಿಷ್ಕಾರದತ್ತ ಮುಖ ಮಾಡಬೇಕಿದೆ ಎಂದರು.
ಈ ಸಂದರ್ಭದಲ್ಲಿ ಶ್ರೀ ದತ್ತಾಶ್ರಮದ ಪ್ರವರ್ತಕ ಸುಭಾಶ್ ಪೂಜಾರಿ ಸಂಗಮ್, ಹರೀಶ್ ತೋಳಾರ್, ಬೈಂದೂರು ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ, ಉದ್ಯಮಿಗಳಾದ ಗುರ್ಮೆ ಸುರೇಶ್ ಶೆಟ್ಟಿ, ಮಲ್ಯಾಡಿ ಶಿವರಾಮ ಶೆಟ್ಟಿ, ಮಾರ್ಕೋಡು ಸುಧೀರ್ ಕುಮಾರ್ ಶೆಟ್ಟಿ, ಬೇಳೂರು ರಾಘವೇಂದ್ರ ಶೆಟ್ಟಿ, ಗೋಕುಲ್ ಶೆಟ್ಟಿ ಉಪ್ಪುಂದ, ಹರೀಶ್ ಶೆಟ್ಟಿ ಮಂಗಳೂರು, ವಿವೇಕ್ ಸುವರ್ಣ, ಭಜರಂಗದಳ ಸಂಚಾಲಕ ಸುನೀಲ್ ಕೆ.ಆರ್, ಗೌರಿಗದ್ದೆ ಆಶ್ರಮದ ಚಂದ್ರಶೇಖರ್ ಜೈಪುರ, ಸುಧಾಕರ ಗೌರಿಗದ್ದೆ ಮೊದಲಾದವರಿದ್ದರು.