ತುಳುನಾಡಿನ ಸಂಸ್ಕೃತಿಯನ್ನು ಸಾರುವ ಕಾಂತಾರ ಚಲನಚಿತ್ರವು ಶತದಿನೋತ್ಸವವನ್ನು ಆಚರಿಸಿದೆ. ಈ ಬಗ್ಗೆ ಹೊಂಬಾಳೆ ಫಿಲಮ್ಸ್ ತನ್ನ ಸಂತಸವನ್ನು ಹಂಚಿಕೊಂಡಿದೆ.
“ಬೆಳಕು ಆದರೆ ಇದು ಬೆಳಕಲ್ಲ100 ದಿನದ ದರ್ಶನ. ನಾವು ಯಾವಾಗಲೂ ಗೌರವಿಸುವ ಚಲನಚಿತ್ರವು ನಮ್ಮನ್ನು ನಮ್ಮ ಮೂಲಕ್ಕೆ ಮರಳಿ ಕರೆದೊಯ್ದು ನಮ್ಮ ಸಂಪ್ರದಾಯಗಳ ಬಗ್ಗೆ ವಿಸ್ಮಯ ಪಡುವಂತೆ ಮಾಡಿತು. ಇದನ್ನು ಮಾಡಿದ ಎಲ್ಲರಿಗೂ ವಂದನೆಗಳು” ಎಂದು ಹೊಂಬಾಳೆ ಟ್ಬೀಟ್ ಮಾಡಿದೆ.
ಏತನ್ಮಧ್ಯೆ, ಯಾವ ಕೆರಾಡಿಯೆಂಬ ಹಳ್ಳಿಯಲ್ಲಿ ಕಾಂತಾರ ಚಲನಚಿತ್ರವನ್ನು ಚಿತ್ರೀಕರಿಸಲಾಯಿತೋ ಅಲ್ಲಿ ಜ.8 ಭಾನುವಾರದಂದು ಕಾಂತಾರ ಚಲನಚಿತ್ರ ಪ್ರದರ್ಶನವನ್ನು ಏರ್ಪಡಿಸಲಾಗಿದೆ. ಇಲ್ಲಿನ ಶ್ರೀ ದುರ್ಗಾಪರಮೇಶ್ವರಿ ಯುವ ಮಂಡಲ ಇವರ ಪ್ರಾಯೋಜಕತ್ವದಲ್ಲಿ ಭಾನುವಾರದಂದು ಸಂಜೆ 7 ಗಂಟೆಗೆ ಕೆರಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ವಠಾರದಲ್ಲಿ ಬೃಹತ್ ಪರದೆಯಲ್ಲಿ ಉಚಿತ ಪ್ರದರ್ಶನ ನಡೆಯಲಿದೆ.