ರೇವಾ: ಶುಕ್ರವಾರ ಮುಂಜಾನೆ ಮಧ್ಯಪ್ರದೇಶದ ರೇವಾದಲ್ಲಿ ದೇವಸ್ಥಾನಕ್ಕೆ ಡಿಕ್ಕಿ ಹೊಡೆದ ನಂತರ ವಿಮಾನ ಅಪಘಾತದಲ್ಲಿ ಪೈಲಟ್ ಸಾವನ್ನಪ್ಪಿದ್ದಾರೆ. ಚೋರ್ಹಾಟಾ ಎಂಬಲ್ಲಿ ಈ ಘಟನೆ ನಡೆದಿದೆ. ಅಪಘಾತದ ನಂತರ ಪೈಲಟ್ ತೀವ್ರವಾಗಿ ಗಾಯಗೊಂಡಿದ್ದರು ಮತ್ತು ಅವರನ್ನು ಸಂಜಯ್ ಗಾಂಧಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೂ ಚಿಕಿತ್ಸೆ ಫಲಕಾರಿಯಾಗದೆ ಅವರು ಸಾವನ್ನಪ್ಪಿದ್ದಾರೆ. ವಿಮಾನವು ಪೈಲಟ್ ತರಬೇತಿ ಕಂಪನಿಗೆ ಸೇರಿತ್ತು.
मध्य प्रदेश के रीवा में विमान हादसा
मंदिर से टकराया विमान, ट्रेनी पायलट की मौत
दूसरे पायलट की हालत गंभीर, इलाज जारी
रुटिन ट्रेनिंग के दौरान मंदिर के शिखर से टकराया विमान #plane_crash_rewa #rewaplanecrash pic.twitter.com/SYe8NKvsT7— Sanjeev 🇮🇳 (@sun4shiva) January 6, 2023
ರೇವಾದ ಧುಮ್ರಿ ಹಳ್ಳಿಯಲ್ಲಿ ತರಬೇತಿ ವಿಮಾನವು ಹಾರಾಟ ನಡೆಸುತ್ತಿದ್ದ ಸಂದರ್ಭ ಅಲ್ಲಿನ ದೇವಸ್ಥಾನದ ಗುಮ್ಮಟಕ್ಕೆ ಡಿಕ್ಕಿ ಹೊಡೆದಿದೆ. ಅಪ್ಘಾತದಲ್ಲಿ ಪೈಲಟ್ ಸಾವನ್ನಪ್ಪಿದ್ದು, ಇತರ ಗಾಯಾಳುಗಳು ಸಂಜಯ್ ಗಾಂಧಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ರೇವಾ ಎಸ್.ಪಿ ನವನೀತ್ ಭಾಸಿನ್ ಸುದ್ದಿ ಸಂಸ್ಥೆ ಎ.ಎನ್.ಐ ಗೆ ತಿಳಿಸಿದ್ದಾರೆ.
ಸ್ಥಳಕ್ಕೆ ಪೊಲೀಸ್ ತುಕುಡಿ ತೆರಳಿದೆ. ಕೆಟ್ಟ ಹವಾಮಾನ ಮತ್ತು ಮಂಜು ಮುಸುಕಿದ್ದರಿಂದ ಅಪಘಾತ ಸಂಭವಿಸಿರಬಹುದು ಎಂದು ಮೇಲ್ನೋಟಕ್ಕೆ ಅಂದಾಜಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಕಾಯಲಾಗುತ್ತಿದೆ.