ಮಂಗಳೂರು ಕುಕ್ಕರ್ ಬಾಂಬ್ ಸ್ಪೋಟ ಪ್ರಕರಣ: ಉಡುಪಿಯಲ್ಲಿ ಎನ್.ಐ.ಎ ತನಿಖೆ

ಉಡುಪಿ: ಬೆಂಗಳೂರಿನ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಅಧಿಕಾರಿಗಳು ಇಲ್ಲಿನ ವಿದ್ಯಾರ್ಥಿ ರಿಹಾನ್ ಶೇಖ್‌ ಎಂಬಾತನ ಫ್ಲಾಟ್‌ ಅನ್ನು ಪರಿಶೀಲನೆ ನಡೆಸಿದ್ದಾರೆ. ಕುಕ್ಕರ್ ಸ್ಫೋಟದ ಆರೋಪಿಗಳೊಂದಿಗೆ ರಿಹಾನ್ ಶೇಖ್‌ ನ ಶಂಕಿತ ಸಂಪರ್ಕದ ಆಧಾರದಲ್ಲಿ ಆತನ ಫ್ಲಾಟ್ ಅನ್ನು ಅಧಿಕಾರಿಗಳು ಪರಿಶೀಲಿಸಿದ್ದಾರೆ.

ಕೊಣಾಜೆ ನಡುಪದವು ಇಂಜಿನಿಯರಿಂಗ್ ಕಾಲೇಜಿನಲ್ಲಿ ಕಲಿಯುತ್ತಿದ್ದ ರಿಹಾನ್ ಉಡುಪಿಯ ಬ್ರಹ್ಮಾವರ ಮೂಲದವನಾಗಿದ್ದಾನೆ. ಆತನ ಪೋಷಕರು ವಾರಂಬಳ್ಳಿಯ ಮೀನಾ ಅನ್ಮೋಲ್ ವಸತಿ ಗೃಹದ ಕಟ್ಟಡದಲ್ಲಿ ವಾಸಮಾಡಿಕೊಂಡಿದ್ದರೆ, ರಿಹಾನ್ ಮಂಗಳೂರಿನ ಬಲ್ಮಠದಲ್ಲಿ ವಾಸವಾಗಿದ್ದನು.

ಅಧಿಕಾರಿಗಳು ಕೆಲವು ದಾಖಲೆಗಳನ್ನು ವಶಕ್ಕೆ ಪಡೆದು ರಿಹಾನ್ ಕುಟುಂಬ ಸದಸ್ಯರನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಫ್ಲಾಟ್ ಬ್ರಹ್ಮಾವರ ತಾಲೂಕಿನ ವರಂಬಳ್ಳಿಯಲ್ಲಿದೆ. ಎನ್‌ಐಎ ಅಧಿಕಾರಿಗಳು ಆರೋಪಿ ವಿದ್ಯಾರ್ಥಿಯನ್ನು ಬೆಂಗಳೂರಿಗೆ ಕರೆದೊಯ್ಯಲಿದ್ದಾರೆ ಎಂದು ವರದಿಯಾಗಿದೆ.