ಕೊಡವೂರು: ಜ್ಞಾನೇಂದ್ರ ಸುವರ್ಣ ಹಾಗೂ ವಾಣಿ ದಂಪತಿಗಳ ಪುತ್ರನಾದ ಗಗನ್ ಜೆ ಸುವರ್ಣ ಇವರು ಸ್ಟ್ರಿಂಗ್ ಆರ್ಟ್ (ನೂಲು ಕಲೆ)ನಲ್ಲಿ ವಿಶಿಷ್ಟ ಸಾಧನೆ ಮಾಡಿದ್ದು, ಇವರನ್ನು ಕೊಡವೂರಿನ ನಾಗರಿಕರ ಪರವಾಗಿ ಗೌರವಿಸುವ ಕಾರ್ಯ ನಡೆಯಿತು.
ಗಗನ್ ಇವರು ಉಡುಪಿಯ ಪೂರ್ಣ ಪ್ರಜ್ಞಾ ಕಾಲೇಜಿನ ವಾಣಿಜ್ಯ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಾ ಇದ್ದು, ಸುಮಾರು 200 ಸಣ್ಣ ಕಬ್ಬಿಣದ ಮೊಳೆಗಳನ್ನು ಹಾಗೂ 2,500 ನೂಲಿನ ಉಂಡೆಗಳನ್ನು ಉಪಯೋಗಿಸಿ ಕಾಂತಾರ ಸಿನಿಮಾದ ಪುಟ್ಟ ಪ್ರತಿಕೃತಿಯನ್ನು ರಚಿಸಿ ಇಂಡಿಯಾ ಬುಕ್ ಆಫ್ ರೆಕಾರ್ಡ್ ನಲ್ಲಿ ಗುರುತಿಸಿಕೊಂಡಿದ್ದಾರೆ.
ಈ ಸಂದರ್ಭದಲ್ಲಿ ನಗರಸಭಾ ಸದಸ್ಯ ವಿಜಯ್ ಕೊಡವೂರು, ಶ್ರೀ ಶಂಕರನಾರಾಯಣ ದೇವಸ್ಥಾನದ ಸದಸ್ಯ ಜೀವನ್, ವಾರ್ಡ್ ಅಭಿವೃದ್ದಿ ಸಮಿತಿ ಅಧ್ಯಕ್ಷ ಅಶೋಕ್ ಶೆಟ್ಟಿಗಾರ್, ಪ್ರಭಾತ್ ಕೊಡವೂರು, ಚಂದ್ರವತಿ ಕಾನಂಗಿ, ಸುರೇಶ್ ಮಹಾಗಣಪತಿ ಪೈಟಿಂಗ್, ತೆಂಕನಿಡಿಯೂರು ಕಾಲೇಜಿನ ಶಿಕ್ಷಕಿ ಸುಷ್ಮಾ ಮತ್ತಿತರರು ಉಪಸ್ಥಿತರಿದ್ದರು.