ಸಂಘ- ಸಂಸ್ಥೆಗಳ ಸಾಮಾಜಿಕ ಕಾರ್ಯಗಳು ಅದರ ಅಭಿವೃದ್ದಿಗೆ ಕಾರಣ: ಸರಿತಾ ಸಂತೋಷ್

ಉಡುಪಿ: ಸಾಮಾಜಿಕ ಕಳಕಳಿಯಿಂದ ಕೂಡಿದ ಕಾರ್ಯಗಳು ಸಂಘ- ಸಂಸ್ಥೆಗಳ ಅಭಿವೃದ್ಧಿಗೆ ಕಾರಣವಾಗುತ್ತದೆ ಎಂದು ಕರ್ನಾಟಕ ಸರ್ಕಾರದ ಮಹಿಳಾ ಮತ್ತು ಮಕ್ಕಳ ಆರೋಗ್ಯ ಇಲಾಖೆಯ ಪ್ಯಾನಲಿಸ್ಟ್ ಪವರ್ ಪ್ಲಾಟ್ಫಾರ್ಮ್ ಆಫ್ ವಿಮೆನ್‌ ಎಂಟ್ರಪ್ರೇನಿಯರ್ಸ್ ಸ್ಥಾಪಕ ಸದಸ್ಯೆ ಸರಿತಾ ಸಂತೋಷ್ ಹೇಳಿದರು.

ಉಪ್ಪೂರಿನ ಸ್ಪಂದನಾ ಭೌತಿಕ ಭಿನ್ನ ಸಾಮರ್ಥ್ಯ ಪುನರ್ವಸತಿ ಕೇಂದ್ರದಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿಆರ್ಗನೈಸೇಷನ್ ಫಾರ್‌ ರೂರಲ್‌ ಡೆವಲಪ್ಮೆಂಟ್‌ ಎಜ್ಯುಕೇಶನ್‌ ಎಂಡ್‌ ರಿಸರ್ಚ್ ಇದರ 2023 ನೇ ವರ್ಷದ ಚಟುವಟಿಕೆಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.

ಸ್ಪಂದನಾ ಸಂಸ್ಥೆಯ ಸ್ಥಾಪಕ ಪ್ರಾಂಶುಪಾಲ ಜನಾರ್ಧನ್‌ ಇವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಕರ್ತವ್ಯನಿಷ್ಠೆ ಇದ್ದರೆ ಇಟ್ಟ ಗುರಿಗಳನ್ನು ಕ್ಲಪ್ತ ಸಮಯದಲ್ಲಿ ಪರಿಣಾಮಕಾರಿಯಾಗಿ ಸಾಧಿಸಲು ಸಾಧ್ಯ. ದಿವ್ಯಾಂಗರ ಸೇವೆ ನಡೆಸಿದರೆ ಅವರ ಶುಭ ಹಾರೈಕೆ ಮತ್ತು ಆಶೀರ್ವಾದದಿಂದ ಜೀವನದಲ್ಲಿ ನೆಮ್ಮದಿ ಸಿಗುತ್ತದೆ ಎಂದರು.

ಮುಖ್ಯ ಅತಿಥಿ ದೇವಕಿ ಶುಭ ಹಾರೈಸಿದರು.

ಆರ್ಗನೈಸೇಷನ್ ಫಾರ್‌ ರೂರಲ್‌ ಡೆವಲಪ್ಮೆಂಟ್‌ ಎಜ್ಯುಕೇಶನ್‌ ಎಂಡ್‌ ರಿಸರ್ಚ್ ಸದಸ್ಯ ಗಣೇಶ್ ಪ್ರಸಾದ್ ಇವರು ಸಂಸ್ಥೆ ನಡೆಸಿದ ಚಟುವಟಿಕೆಗಳ ವರದಿ ವಾಚಿಸಿದರು. ಜಿಲ್ಲಾ ಸಂಯೋಜಕ ಮತ್ತು ಆರ್ಡರ್ ಸದಸ್ಯ ವಿವೇಕ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಪಲ್ಲವಿ ವಂದಿಸಿದರು.