ಉಡುಪಿ: ಆಯುಷ್ ಟಿ.ವಿಯು ಕಳೆದ 7 ವರ್ಷಗಳಿಂದ ನಾಡಿನ ಜನರ ಆರೋಗ್ಯ ಮತ್ತು ಭಾರತೀಯ ಪ್ರಾಚೀನ ವೈದ್ಯಕೀಯ ಪರಂಪರೆಯನ್ನು ವಿಶ್ವಕ್ಕೆ ತಲುಪಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಇದರೊಂದಿಗೆ ಯೋಗದಿಂದ ಆರೋಗ್ಯವಾಗಿರಲು ಈಗಾಗಲೇ ಹಲವಾರು ಕಾರ್ಯಕ್ರಮಗಳನ್ನು ರೂಪಿಸಿ, ಜನರಿಗೆ ತಲುಪಿಸಿದೆ. ಯೋಗವನ್ನು ದೈನಂದಿನ ಜೀವನದ ಒಂದು ಭಾಗವಾಗಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಅಂಗವಾಗಿ ಮೊರಾರ್ಜಿ ದೇಸಾಯಿ ರಾಷ್ಟ್ರೀಯ ಯೋಗ ಸಂಸ್ಥೆ (ಎಂ.ಡಿ.ಎನ್.ವೈ) ಯ ಯೋಗ ಸರ್ಟಿಫಿಕೇಷನ್ ಬೋರ್ಡ್ ಸಿಬ್ಬಂದಿ ಪ್ರಮಾಣೀಕರಣ ಮಾನ್ಯತೆಯನ್ನು ಆಯುಷ್ ಟಿ.ವಿ ಪಡೆದಿದೆ.
ಆಯುಷ್ ಟಿ.ವಿ.ಯು ರಾಜ್ಯದಾದ್ಯಂತ ಹತ್ತು ಸಾವಿರಕ್ಕಿಂತಲೂ ಹೆಚ್ಚು ಯೋಗ ಬೋಧಕರನ್ನು ಆನ್‌ಲೈನ್ ಪರೀಕ್ಷೆಯ ಮೂಲಕ ನಡೆಸಲು ಚಾಲನೆ ನೀಡುತ್ತಿದ್ದು, ಯೋಗಾಭ್ಯಾಸದಲ್ಲಿ ಆಸಕ್ತಿ ಹೊಂದಿರುವ, ಕನಿಷ್ಠ ಎಸ್.ಎಸ್.ಎಲ್.ಸಿ ಉತ್ತೀರ್ಣರಾಗಿರುವ, 18 ವರ್ಷ ಮೇಲ್ಪಟ್ಟ, ಯೋಗ ಫಾರ್ ವೆಲ್‌ನೆಸ್ ಸರ್ಟಿಫಿಕೇಟ್ ಕೋರ್ಸ್ನಲ್ಲಿ ದೈಹಿಕ ಶಿಕ್ಷಕರು, ವಿದ್ಯಾರ್ಥಿಗಳು, ಗೃಹಿಣಿಯರು ಭಾಗವಹಿಸಬಹುದಾಗಿದ್ದು, ರಾಜ್ಯದ ಎಲ್ಲಾ ಯೋಗಾಸಕ್ತರು ಇದರ ಸದುಪಯೋಗ ಪಡೆದುಕೊಳ್ಳಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ವೆಬ್‌ಸೈಟ್ www.ayushtv.in/prcb ಅಥವಾ ಮೊ.ನಂ: 8310471614 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.