ಪ್ರಧಾನಿ ಮೋದಿ ಶತಾಯುಷಿ ತಾಯಿ ಹೀರಾ ಬಾ ಇನ್ನಿಲ್ಲ…

ಅಹಮದಾಬಾದ್‌: ಇಲ್ಲಿನ ಯುಎನ್ ಮೆಹ್ತಾ ಆಸ್ಪತ್ರೆಗೆ ದಾಖಲಾದ ಎರಡು ದಿನಗಳ ನಂತರ ಪ್ರಧಾನಿ ನರೇಂದ್ರ ಮೋದಿ ಅವರ ತಾಯಿ ಹೀರಾಬೆನ್ ಮೋದಿ ಅವರು ಶುಕ್ರವಾರ ತಮ್ಮ 100 ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ

Image

“ಭವ್ಯವಾದ ಶತಮಾನವು ದೇವರ ಪಾದಸೇರಿತು. ಅಮ್ಮಾ ನಾನು ಯಾವಾಗಲೂ ತಪಸ್ವಿಯ ಪ್ರಯಾಣ, ನಿಸ್ವಾರ್ಥ ಕರ್ಮಯೋಗಿ ಮತ್ತು ಮೌಲ್ಯಗಳಿಗೆ ಬದ್ಧವಾದ ಜೀವನವನ್ನು ಒಳಗೊಂಡಿರುವ ತ್ರಿತ್ರಿಮೂರ್ತಿಗಳನ್ನು ಅನುಭೂತಿ ಮಾಡಿದ್ದೇನೆ ಎಂದು ನಾನು ಯಾವಾಗಲೂ ಭಾವಿಸುತ್ತೇನೆ.”

“ಅವಳ 100 ನೇ ಹುಟ್ಟುಹಬ್ಬದಂದು ನಾನು ಅವಳನ್ನು ಭೇಟಿಯಾದಾಗ, ಅವಳು ಒಂದು ಮಾತನ್ನು ಹೇಳಿದಳು – ಯಾವಾಗಲೂ ನೆನಪಿಟ್ಟುಕೊಳ್ಳು – ಬುದ್ಧಿವಂತಿಕೆಯಿಂದ ಕೆಲಸ ಮಾಡು, ಶುದ್ಧತೆಯಿಂದ ಜೀವನ ನಡೆಸು ” ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.

ಜೂನ್ 18, 1923 ರಂದು ಜನಿಸಿದ ಹೀರಾಬೆನ್ ಮೋದಿ ಅವರ ಹುಟ್ಟೂರು ಗುಜರಾತ್‌ನ ಮೆಹ್ಸಾನಾದ ವಡ್ನಗರ. ಅವರಿಗೆ ಐದು ಗಂಡು ಮಕ್ಕಳು ಪ್ರಧಾನಿ ನರೇಂದ್ರ ಮೋದಿ, ಪಂಕಜ್ ಮೋದಿ, ಸೋಮಾ ಮೋದಿ, ಅಮೃತ್ ಮೋದಿ ಮತ್ತು ಪ್ರಹ್ಲಾದ್ ಮೋದಿ, ಮತ್ತು ಒಬ್ಬ ಪುತ್ರಿ ವಸಂತಿಬೆನ್ ಹಸ್ಮುಖಲಾಲ್ ಮೋದಿ ಇದ್ದಾರೆ. ಹೀರಾಬೆನ್ ಮೋದಿ ಅವರು ಪ್ರಧಾನಿಯವರ ಕಿರಿಯ ಸಹೋದರ ಪಂಕಜ್ ಮೋದಿ ಅವರೊಂದಿಗೆ ಗಾಂಧಿನಗರ ಸಮೀಪದ ರೇಸನ್ ಗ್ರಾಮದಲ್ಲಿ ವಾಸಿಸುತ್ತಿದ್ದರು.

ತಾಯಿ ಹೀರಾಬೆನ್ ಮೋದಿ ಅವರ ಪಾರ್ಥಿವ ಶರೀರಕ್ಕೆ ಪ್ರಧಾನಿ ಮೋದಿ ಹೆಗಲು ನೀಡಿದ್ದಾರೆ.

https://twitter.com/i/status/1608657708382826498

ಹೀರಾ ಬಾ ನಿಧನಕ್ಕೆ ಗಣ್ಯಾತಿಗಣ್ಯರು ಸಂತಾಪ ಸೂಚಿಸುತ್ತಿದ್ದಾರೆ.