ಮಾದಕ ವಸ್ತು ಮಾರಾಟ ಯತ್ನ: ಆರೋಪಿಯ ಬಂಧನ; ಗಾಂಜಾ ಎಂಡಿಎಂಎ ವಶ

ಉಡುಪಿ: ಮಾದಕ ವಸ್ತುಗಳ ಮಾರಾಟಕ್ಕೆ ಯತ್ನಿಸುತ್ತಿದ್ದ ವ್ಯಕ್ತಿಯನ್ನು ಮಣಿಪಾಲ ಪೊಲೀಸರು ಬಂಧಿಸಿ 41 ಗ್ರಾಂ ಗಾಂಜಾ, 1.3 ಗ್ರಾಂ ಎಂಡಿಎಂಎ ಮಾತ್ರೆಗಳು, ಆರೋಪಿ ವಶದಲ್ಲಿದ್ದ 2 ಮೊಬೈಲ್ ಮತ್ತು ಸ್ಕೂಟರ್ ಗಳನ್ನು ವಶಪಡಿಸಿಕೊಂಡಿದ್ದಾರೆ.

ಬಂಧಿತ ಆರೋಪಿಯನ್ನು ಸರಳೆಬೆಟ್ಟು ನಿವಾಸಿ ಇಕ್ಬಾಲ್ ಎಂದು ಗುರುತಿಸಲಾಗಿದೆ.  ಡಿಸೆಂಬರ್ 27ರಂದು ರಂದು ಖಚಿತ ಮಾಹಿತಿ ಮೇಲೆ ಮಣಿಪಾಲದ ಆರ್.ಎಸ್.ಬಿ ಭವನದ ಬಳಿ ದಾಳಿ ಮಾಡಿ 41 ಗ್ರಾಂ ಗಾಂಜಾ, 1.3 ಗ್ರಾಂ ಎಂಡಿಎಂಎ ಮಾತ್ರೆಗಳನ್ನು, ಆರೋಪಿ ವಶದಲ್ಲಿದ್ದ 2 ಮೊಬೈಲ್ ಮತ್ತು ಸ್ಕೂಟರ್ ವಶಪಡಿಸಿಕೊಂಡಿದ್ದಾರೆ. ವಶಪಡಿಸಿಕೊಂಡ ನಿಷೇಧಿತ ಮಾದಕ ವಸ್ತು ಮತ್ತು ಸ್ಕೂಟರ್ ನ ಒಟ್ಟು ಅಂದಾಜು ಮೌಲ್ಯ ರೂ 38,810/- ಆಗಿರುತ್ತದೆ. ಬಂಧಿತ ಆರೋಪಿಯನ್ನು ವಿಚಾರಣೆ ನಡೆಸಿ ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಹೆಚ್ಚಿನ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಪ್ರಕರಣದಲ್ಲಿ ಭಾಗಿಯಾಗಿರುವ ಇನ್ನೂ ಕೆಲವು ವ್ಯಕ್ತಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲು ಬಾಕಿ ಇದೆ ಎನ್ನಲಾಗಿದೆ.

ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಅಕ್ಷಯ್ ಮಚಿಂದ್ರ ಹಾಕೆ ಇವರ ಮಾರ್ಗದರ್ಶನದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸಿದ್ದಲಿಂಗಪ್ಪ ಟಿ ಕೆ ಎಸ್ ಪಿ ಎಸ್ ತಂಡದ ಸದಸ್ಯರಾದ ದಿನಕರ ಕೆ.ಪಿ ಡಿ.ವೈ.ಎಸ್ಪಿ ಉಡುಪಿ , ದೇವರಾಜ ಟಿ.ವಿ ಪೊಲೀಸ್‌ ನಿರೀಕ್ಷಕರು ಮಣಿಪಾಲ ಠಾಣೆ, ಅಬ್ದುಲ್ ಖಾದರ್ ಪಿ.ಎಸ್.ಐ ಮಣಿಪಾಲ ಠಾಣೆ , ನಿಧಿ ಪ್ರೊ.ಪಿ.ಎಸ್.ಐ ಮಣಿಪಾಲ ಠಾಣೆ, ಉಡುಪಿ ಸಹಾಯಕ ಡ್ರಗ್ಸ್ ಕಂಟ್ರೋಲರ್ ಶಂಕರ್‌ ನಾಯ್ಕ್‌, ಗ್ರಾಮ ಲೆಕ್ಕಾಧಿಕಾರಿ ಪ್ರಮೋದ್ ಕುಮಾರ್ ಮತ್ತು ಗುರು ಪ್ರಸಾದ್, ಮಣಿಪಾಲ ಠಾಣೆಯ ಸಿಬ್ಬಂದಿಗಳಾದ ಎ.ಎಸ್.ಐ ಶೈಲೇಶ್ ಕುಮಾರ, ಹೆಚ್ ಸಿ ಇಮ್ರಾನ್, ಸಂತೋಷ್, ಸುರೇಶ ಕುಮಾರ್‌ ,ಪಿಸಿ ಅರುಣ್ ಕುಮಾರ್ , ಆನಂದಯ್ಯ, ಚನ್ನೇಶ್, ಮಂಜುನಾಥ, ಸುದೀಪ್ ಅವರನ್ನು ಒಳಗೊಂಡ ತಂಡ ಕಾರ್ಯಾಚರಣೆಯನ್ನು ಯಶಸ್ವಿಗೊಳಿಸಸಿದೆ.