ನವದೆಹಲಿ: ಭಾರತದಾದ್ಯಂತ ರಿಲಯನ್ಸ್ ಜಿಯೋ ಮೊಬೈಲ್ ಮತ್ತು ಜಿಯೋ ಫೈಬರ್ ಸೇವೆಗಳು ಡೌನ್ ಆಗಿವೆ ಎಂದು ಅನೇಕ ಬಳಕೆದಾರರು ಹೇಳಿದ್ದಾರೆ. ಅನೇಕ ಜಿಯೋ ಚಂದಾದಾರರು ಟ್ವಿಟರ್ ನಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಂಡು, ಜಿಯೋ ನೆಟ್‌ವರ್ಕ್ ಮೂಲಕ ಇಂಟರ್ನೆಟ್ ಅನ್ನು ಪ್ರವೇಶಿಸಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದಾರೆ.
ಅದೇ ರೀತಿ, ಅನೇಕ ಜಿಯೋ ಫೈಬರ್ ಬ್ರಾಡ್‌ಬ್ಯಾಂಡ್ ಬಳಕೆದಾರರು ಕೂಡಾ ಮನೆಯಲ್ಲಿ ಇಂಟರ್ನೆಟ್ ಬಳಸಲು ಸಾಧ್ಯವಾಗುತ್ತಿಲ್ಲ ಎಂದು ವರದಿ ಮಾಡಿದ್ದಾರೆ. ಡೌನ್ ಡಿಟೆಕ್ಟರ್ ಪ್ರಕಾರ, ಜಿಯೋ ಮೊಬೈಲ್ ಮತ್ತು ಬ್ರಾಡ್‌ಬ್ಯಾಂಡ್ ಸೇವೆಗಳು ಇಂದು ಮುಂಜಾನೆಯಿಂದ ಸ್ಥಗಿತವನ್ನು ಎದುರಿಸುತ್ತಿವೆ ಮತ್ತು ಪ್ರಸ್ತುತ ಜಿಯೋ ಮೊಬೈಲ್ ಮತ್ತು ಬ್ರಾಡ್‌ಬ್ಯಾಂಡ್ ಸೇವೆಗಳನ್ನು ಪ್ರವೇಶಿಸಲು ಸಾಧ್ಯವಾಗದ 400 ಕ್ಕೂ ಹೆಚ್ಚು ಬಳಕೆದಾರರಿಂದ ಈ ದೂರುಗಳು ಕೇಳಿ ಬಂದಿವೆ. ಕಂಪನಿಯಿಂದ ಸಮಸ್ಯೆಗೆ ಸಂಬಂಧಿಸಿದಂತೆ ಯಾವುದೇ ಹೇಳಿಕೆಯನ್ನು ಬಹಿರಂಗಪಡಿಸಲಾಗಿಲ್ಲ.
ಮೊಬೈಲ್ ನಲ್ಲಿ ಜಿಯೋ ನೆಟ್‌ವರ್ಕ್ ಪುನಸ್ಥಾಪಿಸಲು ಈ ರೀತಿ ಮಾಡಿ:
ಹಂತ 1: ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಏರ್‌ಪ್ಲೇನ್ ಮೋಡ್ ಗೆ ಬದಲಾಯಿಸಿ ನೋಡಿ
ಹಂತ 2: ನೆಟ್‌ವರ್ಕ್ ಇನ್ನೂ ಸ್ಥಗಿತವಾಗಿದ್ದರೆ, ಸೆಟ್ಟಿಂಗ್‌ಗಳಿಗೆ ಹೋಗಿ ಮತ್ತು ನೆಟ್‌ವರ್ಕ್ ಆಯ್ಕೆಯನ್ನು ಹಸ್ತಚಾಲಿತವಾಗಿ ಬದಲಾಯಿಸಿ. ಇಲ್ಲಿಂದ ನೀವು ಈಗ ಹಸ್ತಚಾಲಿತವಾಗಿ ಜಿಯೋ ಅನ್ನು ಆಯ್ಕೆ ಮಾಡಬಹುದು.
ಹಂತ 3: ನಿಮ್ಮ ಸ್ಮಾರ್ಟ್‌ಫೋನ್ ಅನ್ನು ರೀಬೂಟ್ ಮಾಡಿ.
ಹಂತ 4: ನೆಟ್‌ವರ್ಕ್ ಇನ್ನೂ ಸಿಗುತ್ತಿಲ್ಲವೆಂದಾದರೆ ಜಿಯೋ ಮೊಬೈಲ್ ಗ್ರಾಹಕ ಸೇವೆಯನ್ನು ಸಂಪರ್ಕಿಸಿ – 1800 889 9999
ಜಿಯೋ ಫೈಬರ್ ಬ್ರಾಡ್ ಬ್ಯಾಂಡ್ ಗಾಗಿ ಈ ರೀತಿ ಮಾಡಿ
ಹಂತ 1: ನಿಮ್ಮ ಜಿಯೋ ರೂಟರ್ ಅನ್ನು ಸ್ವಿಚ್ ಆಫ್ ಮಾಡಿ
ಹಂತ 2: ನಿಮ್ಮ ಫೈಬರ್ ಆಪ್ಟಿಕ್ ವೈರಿಂಗ್ ಅನ್ನು ಪರಿಶೀಲಿಸಿ. ಯಾವುದೇ ಫೈಬರ್ ಆಪ್ಟಿಕ್ ಕೇಬಲ್‌ಗಳಂತೆ, ತಂತಿಯಲ್ಲಿ ಯಾವುದೇ ಚೂಪಾದ ಬಾಗುವಿಕೆ ಇರಬಾರದು.
ಹಂತ 3: ನಿಮ್ಮ ಮನೆಯೊಳಗಿನ ವಿತರಣಾ ಪೆಟ್ಟಿಗೆಯನ್ನು ಪರಿಶೀಲಿಸಿ.
ಹಂತ 4: ನಿಮ್ಮ ರೂಟರ್ ಅನ್ನು ಮರುಪ್ರಾರಂಭಿಸಿ ಮತ್ತು ಅದನ್ನು ಸಂಪೂರ್ಣವಾಗಿ ಬೂಟ್ ಮಾಡಲು ಬಿಡಿ.
ಹಂತ 5: ಇಂಟರ್ನೆಟ್ ಈಗ ಕೆಲಸ ಮಾಡಬೇಕು, ಒಂದು ವೇಳೆ ದೀಪಗಳು ಇನ್ನೂ ಮಿನುಗುತ್ತಿದ್ದರೆ, ಜಿಯೋ ಗ್ರಾಹಕ ಸೇವೆಯನ್ನು ಸಂಪರ್ಕಿಸಿ
ಹಂತ 6: ಆನ್‌ಲೈನ್ ಸಹಾಯಕ್ಕಾಗಿ ಮೈ ಜಿಯೋ ಆಪ್ ಡೌನ್‌ಲೋಡ್ ಮಾಡಿ. 70005 70005 ಗೆ ವಾಟ್ಸ್ಯಾಪ್ ನಲ್ಲಿ ಹಲೋ ಕಳುಹಿಸಿ. ಜಿಯೋ ಫೈಬರ್ ಸಂಪರ್ಕ ಸಂಖ್ಯೆ 1800-896-9999 ಗೆ ಕರೆ ಮಾಡಿ