ಮುಂಬಯಿ: ಸೂಪರ್ ಸ್ಟಾರ್ ರಜನಿಕಾಂತ್ ಮತ್ತು ಅಕ್ಷಯ್ ಕುಮಾರ್ ನಟನೆಯ 2.0 ಸಿನಿಮಾ ದೊಡ್ಡ ಸದ್ದು ಮಾಡಿಲ್ಲ. ಚಿತ್ರಕ್ಕೆ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗಿತ್ತು. ಆದರೆ ಗಳಿಕೆಯಲ್ಲಿ ಹಿಂದೆ ಬೀಳದ ರೋಬೋ 2 ಹಾಕಿದ ಬಂಡವಾಳಕ್ಕಿಂತ ಹೆಚ್ಚು ಲಾಭ ಮಾಡಿದೆ.
543 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿದ್ದ ಸಿನಿಮಾ ಸುಮಾರು 800 ಕೋಟಿ ಕಲೆಕ್ಷನ್ ಮಾಡಿ ದಾಖಲೆ ಮಾಡಿತ್ತು. 2018ರ ಸೆಪ್ಟೆಂಬರ್ 29 ರಂದು ಈ ಚಿತ್ರ ಜಗತ್ತಿನಾದ್ಯಂತ ಬಿಡುಗಡೆಯಾಗಿತ್ತು. ರಜನಿ ಎದುರು ಅಬ್ಬರಿಸಲಿದ್ದಾರೆ ಇಬ್ಬರು ಖಡಕ್ ಖಳನಾಯಕರು ಇದೀಗ, 2.0 ಸಿನಿಮಾ ಚೀನಾ ದೇಶದಲ್ಲಿ ರಿಲೀಸ್ ಆಗುತ್ತಿದೆ. ಜುಲೈ 12 ರಂದು ರಜನಿ ಸಿನಿಮಾ ಚೀನಾದಲ್ಲಿ ತೆರೆಕಾಣುತ್ತಿದ್ದು, ಸುಮಾರು 55 ಸಾವಿರ ಸ್ಕ್ರೀನ್ ನಲ್ಲಿ ಪ್ರದರ್ಶನವಾಗಲಿದೆಯಂತೆ. ಚೀನಾದಲ್ಲಿ ಅಮೀರ್ ಖಾನ್ ಚಿತ್ರಗಳಿಗೆ ಹೆಚ್ಚು ಬೇಡಿಕೆ ಇದ್ದು, ಒಳ್ಳೆಯ ಬಿಸಿನೆಸ್ ಕೂಡ ಮಾಡಿದೆ.
ಶಂಕರ್ ನಿರ್ದೇಶನ ಮಾಡಿದ್ದ 2.0 ಚಿತ್ರವನ್ನ ಲೈಕಾ ಪ್ರೊಡಕ್ಷನ್ ನಿರ್ಮಾಣ ಮಾಡಿತ್ತು. 2010ರಲ್ಲಿ ರಿಲೀಸ್ ಆಗಿದ್ದ ಎಂಥಿರನ್ ಸಿನಿಮಾದ ಮುಂದುವರಿದ ಭಾಗ ಇದಾಗಿದ್ದು, ರಜನಿಕಾಂತ್, ಅಕ್ಷಯ್ ಕುಮಾರ್ ಜೊತೆ ಆಮಿ ಜಾಕ್ಸನ್ ನಟಿಸಿದ್ದಾರೆ