ಬೆಂಗಳೂರು: ಶನಿವಾರ ನಡೆದ ಅಂಧರ ಟಿ20 ವಿಶ್ವಕಪ್ನ ಅಂತಿಮ ಹಣಾಹಣಿಯಲ್ಲಿ ಭಾರತ ಬಾಂಗ್ಲಾದೇಶವನ್ನು ಸೋಲಿಸಿ ಈ ಬಾರಿಯೂ ಕಪ್ ನಮ್ದೇ ಎಂದು ಬೀಗಿದೆ. ಭಾರತವು ಪಂದ್ಯಾವಳಿಯಲ್ಲಿ ತಮ್ಮ ಮೂರನೇ ಪ್ರಶಸ್ತಿಯನ್ನು ದಾಖಲಿಸಿದೆ. ಈ ಪಂದ್ಯದಲ್ಲಿ ಭಾರತ 120 ರನ್ಗಳ ಬೃಹತ್ ಅಂತರದಿಂದ ಎದುರಾಳಿಗಳನ್ನು ಸೋಲಿಸಿದೆ.
ಆರಂಭದಿಂದಲೂ ಆತಿಥೇಯ ತಂಡವು ತಮ್ಮ ನೆರೆಯ ಬಾಂಗ್ಲಾದೇಶದ ವಿರುದ್ಧ ಫೈನಲ್ಗೆ ಹೋಗುವ ನೆಚ್ಚಿನ ತಂಡವಾಗಿತ್ತು ಮತ್ತು ಬೆಂಗಳೂರಿನ ಮೈದಾನದಲ್ಲಿ ಇತಿಹಾಸವನ್ನು ಸೃಷ್ಟಿಸಿ ಅದ್ಭುತ ವಿಜಯವನ್ನು ಪೂರ್ಣಗೊಳಿಸಿತು.
#TeamIndia beat Bangladesh by 120 runs to clinch the 3rd #T20WorldCup 🏆.
📸: @ddsportschannel #BlindCricket🏏 | #INDvBAN pic.twitter.com/AKwH3fIkN7
— All India Radio News (@airnewsalerts) December 17, 2022
ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಮೆನ್ ಇನ್ ಬ್ಲೂ ತಂಡವು 20 ಓವರ್ಗಳಲ್ಲಿ 277 ರನ್ಗಳ ಬೃಹತ್ ಸ್ಕೋರ್ ದಾಖಲಿಸಿತು. ಭಾರತದ ಈ ಮೊತ್ತವನ್ನು ಬೆನ್ನಟ್ಟಲು ಹರಸಾಹಸ ಪಟ್ಟ ಬಾಂಗ್ಲಾ ತಂಡವು 20 ಓವರ್ಗಳಲ್ಲಿ ಕೇವಲ 157 ರನ್ಗಳನ್ನು ಮಾತ್ರ ಪೇರಿಸಲು ಸಾಧ್ಯವಾಯಿತು. ಭಾರತಕ್ಕೆ 120 ರನ್ಗಳ ಸಮಗ್ರ ವಿಜಯ ದೊರೆಯುವ ಮೂಲಕ ಈ ಬಾರಿಯೂ ಕಪ್ ನಮ್ಮದಾಯಿತು.
ಭಾರತವು ಆಯೋಜಿಸಿದ್ದ ಮೂರನೇ ಆವೃತ್ತಿಯ ಸ್ಪರ್ಧೆಯಲ್ಲಿ ಆಸ್ಟ್ರೇಲಿಯಾ, ಬಾಂಗ್ಲಾದೇಶ, ನೇಪಾಳ, ದಕ್ಷಿಣ ಆಫ್ರಿಕಾ ಮತ್ತು ಶ್ರೀಲಂಕಾ ತಂಡಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದವು.
ಭಾರತಕ್ಕೆ ಹಿಂದಿನ ಎರಡು ಟಿ20 ವಿಶ್ವಕಪ್ ಗೆಲುವುಗಳು ಕ್ರಮವಾಗಿ 2012 ಮತ್ತು 2017 ರಲ್ಲಿ ಬಂದಿವೆ. ಇದೀಗ ಫೈನಲ್ನಲ್ಲಿ ಬಾಂಗ್ಲಾದೇಶವನ್ನು ಮಣಿಸಿದ ನಂತರ ಹ್ಯಾಟ್ರಿಕ್ ಗೆಲುವನ್ನು ಸಾಧಿಸಿ ಇತಿಹಾಸ ನಿರ್ಮಿಸಿದೆ. ಎರಡು ವಿಶ್ವ ಏಕದಿನ ಪಂದ್ಯಗಳಲ್ಲಿ ವಿಶ್ವಕಪ್ ಪ್ರಶಸ್ತಿ ಹೊಂದಿದ್ದ ಭಾರತ ಮೂರನೇ ಟಿ20 ಪ್ರಶಸ್ತಿಯನ್ನೂ ಗೆದ್ದ ನಂತರ ಅಂಧರ ಕ್ರಿಕೆಟ್ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ತಂಡವಾಗಿರುವ ಹೆಗ್ಗಳಿಕೆಗೆ ಪಾತ್ರವಾಗಿದೆ.