ಕುಂದಾಪುರ: ಸಾಲದ ಹಣದ ವಿಚಾರದಲ್ಲಿ ಕಾರ್ಮಿಕರ ಕೋಣೆಯಲ್ಲಿ ವ್ಯಕ್ತಿಯೋರ್ವ ಕತ್ತಿಯಿಂದ ಇನ್ನೋರ್ವನಿಗೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದ ಬಗ್ಗೆ ಅಪರಾಧ ಸಾಭೀತಾಗಿದ್ದು ಕುಂದಾಪುರದಲ್ಲಿನ ಹೆಚ್ಚುವರಿ ಜಿಲ್ಲ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಪ್ರಕಾಶ್ ಖಂಡೇರಿ ಈ ಬಗ್ಗೆ ತೀರ್ಪು ಪ್ರಕಟಿಸಿ ಶಿಕ್ಷೆ ಪ್ರಮಾಣವನ್ನು ಜೂ.೧೧ ರಂದು ಪ್ರಕಟಿಸುವುದಾಗಿ ಘೋಷಿಸಿದ್ದಾರೆ.
೨೦೧೬ ಜುಲೈ ೧೦ ರಂದು ಶಂಕರನಾರಾಯಣ ಪೊಲೀಸ್ ಠಾಣೆ ವ್ಯಾಪ್ತಿಯ ಬೆಳ್ವೆ ಗ್ರಾಮದ ಸೂರ್ಗೋಳಿ ಜಲ್ಲಿ ಕ್ರಷರ್ ಲೇಬರ್ ರೂಂನಲ್ಲಿ ಈ ಘಟನೆ ನಡೆದಿತ್ತು.
ಅಲ್ಲಿನ ಕಾರ್ಮಿಕ ರಾಜಕುಮಾರ್ ಹಾಗೂ ಗದಗದ ಯಲ್ಲಪ್ಪ ನಡುವಿನ ಹಣಕಾಸು ವಿಚಾರದ ಮಾತುಕತೆಯಲ್ಲಿ ಯಲ್ಲಪ್ಪ ರಾಜಕುಮಾರ್ ಮೇಲೆ ಕತ್ತಿಯಿಂದ ಕುತ್ತಿಗೆಗೆ ಮಾರಣಾಂತಿಕ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ್ದ. ಈ ಬಗ್ಗೆ ಅಂದಿನ ಶಂಕರನಾರಾಯಣ ಪಿಎಸ್ಐ ಸುನೀಲ್ ಕುಮಾರ್ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದು ೧೦ ಮಂದಿ ವಿಚಾರಣೆ ನಡೆದಿತ್ತು.
ReplyReply to allForward
|