ಕೋಟ: ವಿದ್ಯಾರ್ಥಿ ಮಿತ್ರ ಸೇವಾ ಟ್ರಸ್ಟ್ (ರಿ) ಅಚ್ಲ್ಯಾಡಿ ಇದರ ಆಶ್ರಯದಲ್ಲಿ ಲಯನ್ಸ್ ಕ್ಲಬ್ ಬನ್ನಾಡಿ ವಡ್ದರ್ಸೆ ಇದರ ಪ್ರಾಯೋಜಕತ್ವದಲ್ಲಿ ವಿವೇಕಾನಂದ ಪ್ರೌಢಶಾಲೆ, ಕೋಟ ಇಲ್ಲಿಯ ವಿದ್ಯಾರ್ಥಿಗಳಿಗೆ ಪರೀಕ್ಷಾ ಆತಂಕ ಮತ್ತು ಪರಿಹಾರೋಪಾಯಗಳು ಕುರಿತು ಆಪ್ತ ಸಮಾಲೋಚನೆ ಮತ್ತು ಕಾರ್ಯಗಾರವನ್ನು ಸೋಮವಾರ ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದಲ್ಲಿ ಲಯನ್ಸ್ ಕ್ಲಬ್ ಬನ್ನಾಡಿ ವಡ್ದರ್ಸೆಯ ಕಾರ್ಯದರ್ಶಿ ಅಜಿತ್ ಶೆಟ್ಟಿ ಕೊತ್ತಾಡಿ, ಸಂಪನ್ಮೂಲ ವ್ಯಕ್ತಿಗಳಾದ ಗಿರೀಶ್ ಎಂ ಎನ್ ಉಪಸ್ಥಿತರಿದ್ದರು.
ವಿವೇಕಾನಂದ ಜೂನಿಯರ್ ಕಾಲೇಜಿನ ಪ್ರಾಂಶುಪಾಲ ಜಗದೀಶ್ ನಾವಡ ಸ್ವಾಗತಿಸಿ, ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ವೆಂಕಟೇಶ ಉಡುಪ ವಂದಿಸಿದರು.