ಉಡುಪಿ: ಉಡುಪಿ ಕಥೋಲಿಕ್ ಕ್ರೆಡಿಟ್ ಕೋ- ಆಪರೇಟಿವ್ ಸೊಸೈಟಿ ಇದರ ರಜತ ಸಂಭ್ರಮ ಸಮಾರಂಭ
ವು ಡಿ18 ರವಿವಾರದಂದು ಪೂರ್ವಾಹ್ನ 10:30ಕ್ಕೆ “ಆವೆ ಮರಿಯಾ” ಸಭಾಂಗಣ, ಶೋಕ ಮಾತಾ ಇಗರ್ಜಿ ವಠಾರದಲ್ಲಿ ನಡೆಯಲಿದೆ.
ಅಲೋಶಿಯಸ್ ಡಿ’ ಅಲ್ಮೇಡಾ ಅಧ್ಯಕ್ಷರು, ಉಡುಪಿ ಕಥೋಲಿಕ್ ಕ್ರೆ.ಕೋ.ಸೊ.ನಿ. ಉಡುಪಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಲಿದ್ದು, ಶಾಸಕ ಕೆ. ರಘುಪತಿ ಭಟ್ ಉದ್ಘಾಟಿಸಲಿದ್ದಾರೆ.
ಉಡುಪಿ ಕೆಥೋಲಿಕ್ ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷ ಪರಮಪೂಜ್ಯ ಡಾ| ಜೆರಾಲ್ಡ್ ಐಸಾಕ್ ಲೋಬೋ ಆಶೀರ್ವಚನ ಮಾಡಲಿದ್ದಾರೆ.
ಫಾ| ವಲೇರಿಯನ್ ಮೆಂಡೋನ್ಸಾ ರೆಕ್ಟರ್, ಮಿಲಾಗ್ರಿಸ್ ಕೆಥೆದ್ರಲ್, ಕಲ್ಯಾಣಪುರ, ಉಡುಪಿ, ಫಾ| ಚಾರ್ಲ್ಸ್ ಮಿನೇಜಸ್ ಧರ್ಮ ಗುರುಗಳು, ಶೋಕಮಾತಾ ಇಗರ್ಜಿ, ವಿನಯಕುಮಾರ್ ಸೊರಕೆ ಮಾಜಿ ಸಚಿವ, ಬಿ. ಜಯಕರ ಶೆಟ್ಟಿ, ಇಂದ್ರಾಳಿ ಅಧ್ಯಕ್ಷರು, ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್, ಲಕ್ಷ್ಮೀ ನಾರಾಯಣ ಸಹಕಾರ ಸಂಘಗಳ ಉಪ ನಿಬಂಧಕರು, ಶ್ರೀಮತಿ ಲಾವಣ್ಯ ಸಹಕಾರ ಸಂಘಗಳ ಸಹಾಯಕ ನಿಬಂಧಕರು, ಕುಂದಾಪುರ ಉಪವಿಭಾಗ, ಶ್ರೀಮತಿ ಮೇರಿ ಡಿಸೋಜ ಅಧ್ಯಕ್ಷರು, ಕಥೋಲಿಕ್ ಸಭಾ ಉಡುಪಿ ಪ್ರದೇಶ, ಉಡುಪಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಸಂಸ್ಥೆಯ ಅಧ್ಯಕ್ಷ ಅಲೋಶಿಯಸ್ ಡಿ’ ಅಲ್ಮೇಡಾ, ಉಪಾಧ್ಯಕ್ಷ ಲೂವಿಸ್ ಲೋಬೊ, ಪ್ರಧಾನ ವ್ಯವಸ್ಥಾಪಕ ಸಂದೀಪ್ ಎ. ಫೆರ್ನಾಂಡೀಸ್ ಆಡಳಿತ ಮಂಡಳಿ ನಿರ್ದೇಶಕಕರಾದ ಇಗ್ನೇಷಿಯಸ್ ಮೋನಿಸ್, ಫ್ರಾಂಕ್ಲಿನ್ ಮಿನೇಜಸ್, ಫೆಲಿಕ್ಸ್ ಪಿಂಟೋ, ಜೇಮ್ಸ್ ಡಿ’ಸೋಜ, ಪರ್ಸಿ ಜೆ. ಡಿ’ಸೋಜ, ಆರ್ಚಿಬಾಲ್ಡ್ ಎಸ್. ಡಿ’ಸೋಜ, ಕೇವಿನ್ ಆರ್ .ಪಿರೇರಾ, ಶ್ರೀಮತಿ ಜೆಸಿಂತಾ ಡಿ’ಸೋಜ, ಗಿಲ್ಬರ್ಟ್ ಫೆರ್ನಾಂಡೀಸ್, ಡಾ| ನೇರಿ ಕರ್ನೇಲಿಯೋ, ಶ್ರೀಮತಿ ಲೋಯ್ಸೆಟ್ ಜೆ. ಕರ್ನೇಲಿಯೋ ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿರಲಿದ್ದಾರೆ.