ಉಡುಪಿ, ಡಿಸೆಂಬರ್ 6 (ಕವಾ): ಪಶುಪಾಲನಾ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಹಾಲು ಉತ್ಪಾದಕರಿಗೆ ಉತ್ತೇಜನ ಕಾರ್ಯಕ್ರಮದಡಿ ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪಯೋಜನೆಯಡಿ ಜಿಲ್ಲೆಯಲ್ಲಿ ಮಿಶ್ರ ತಳಿ ಹಸು / ಸುಧಾರಿತ ತಳಿ ಎಮ್ಮೆಗಳ ಹಾಗೂ ಕುರಿ/ಮೇಕೆಗಳ ಘಟಕಗಳನ್ನು ಅನುಷ್ಠಾನಗೊಳಿಸಲು ಅರ್ಹ ಹಾಲು ಉತ್ಪಾದಕ ರೈತರಿಂದ ಅರ್ಜಿ ಅಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸಲು ಡಿಸೆಂಬರ್ 30 ಕೊನೆಯ ದಿನ. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ತಾಲೂಕು ಮುಖ್ಯ ಪಶು ವೈದ್ಯ ಅಧಿಕಾರಿ (ಆಡಳಿತ), ಪಶು ಆಸ್ಪತ್ರೆ, ಉಡುಪಿ ದೂ.ಸಂಖ್ಯೆ: 0820-2520659, ಕಾಪು ದೂ.ಸಂಖ್ಯೆ: 0820-2551175, ಬ್ರಹ್ಮಾವರ ದೂ.ಸಂಖ್ಯೆ: 0820-2561101, ಕುಂದಾಪುರ ದೂ.ಸಂಖ್ಯೆ: 08254-230776, ಬೈಂದೂರು ದೂ.ಸಂಖ್ಯೆ: 08254-251076, ಕಾರ್ಕಳ ದೂ.ಸಂಖ್ಯೆ: 08258-298448 ಮತ್ತು ಹೆಬ್ರಿ ದೂ.ಸಂ.ಖ್ಯೆ: 08253-251203 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಪಶುಪಾಲನಾ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.