ಉಡುಪಿ: ಪೂಜ್ಯ ಪುತ್ತಿಗೆ ಶ್ರೀಪಾದರು ಅಮೆರಿಕಾದ ಫೀನಿಕ್ಸ್ ನಗರದಲ್ಲಿ ಸ್ಥಾಪಿಸಿದ ಪ್ರಥಮ ದೇವಾಲಯದಲ್ಲಿ ಪೂಜೆಗೊಳ್ಳುವ ಶ್ರೀ ವೆಂಕಟೇಶ್ವರ ದೇವರಿಗೆ ಅಲ್ಲಿಯ ಭಕ್ತರಾದ ಶ್ರೀಮತಿ ಅನಿಲಾ ದಂಪತಿಗಳು 2 ಕೋಟಿ ರೂಪಾಯಿ ಬೆಲೆ ಬಾಳುವ ವಜ್ರಖಚಿತ ಸ್ವರ್ಣಮಯ ಕಿರೀಟವನ್ನು ಶ್ರೀ ಪುತ್ತಿಗೆ ಶ್ರೀಪಾದರಿಗೆ ಗುರುವಾರ ಅರ್ಪಿಸಿದರು. ಶ್ರೀ ವೆಂಕಟೇಶ್ವರನ ಅನುಗ್ರಹದಿಂದ ಕಿರೀಟ ಅರ್ಪಿಸಿದ ಕುಟುಂಬಕ್ಕೂ, ಲೋಕಕ್ಕೂ ಕಲ್ಯಾಣವಾಗಲಿ ಎಂದು ಶ್ರೀಪಾದರು ಹಾರೈಸಿದರು.
ಈ ಅಮೂಲ್ಯ ಮತ್ತು ದುಬಾರಿ ಕಿರೀಟ ಜನವರಿ1 ರಂದು ಶ್ರೀ ವೆಂಕಟೇಶನ ಮುಕುಟವನ್ನಲಂಕರಿಸಲಿದೆ.
ಪ್ರಧಾನ ಅರ್ಚಕರಾದ ಕಿರಣಾಚಾರ್ಯ, ಪ್ರಧಾನ ಕಾರ್ಯದರ್ಶಿ ಪ್ರಸನ್ನಾಚಾರ್ಯ ಉಪಸ್ಥಿತರಿದ್ದರು.