ಉಡುಪಿ: ಕರಾವಳಿ ಕರ್ನಾಟಕದ ಪುಟಾಣಿ ಹಾಡುಗಾರರಿಗಾಗಿ ಸಜ್ಜಾಗಿರುವ ಹೊಚ್ಚ ಹೊಸ ಸಿಂಗಿಂಗ್ ಟಿವಿ ರಿಯಾಲಿಟಿ ಶೋ ಕಾರ್ಯಕ್ರಮದ ಪೋಸ್ಟರ್ ಬಿಡುಗಡೆ ಸಮಾರಂಭ ಡಿಸೆಂಬರ್ 7 ರಂದು ಉಡುಪಿ ಇಂದ್ರಾಳಿಯ ರಿಧಿ ಕ್ರಿಯೇಷನ್ಸ್ ಸಿನಿ ಸ್ಟುಡಿಯೋದಲ್ಲಿ ಜರುಗಿತು.
ಹಿರಿಯ ಸಾಹಿತಿ, ಸಂಪಾದಕಿ, ಪತ್ರಕರ್ತೆ ಡಾ. ಸಂಧ್ಯಾ ಪೈ ಅವರು ಪೋಸ್ಟರ್ ಬಿಡುಗಡೆ ಮಾಡಿ ಮಾತಾನಾಡಿ, ಕಿರಿಯ ವಯಸ್ಸಿನಲ್ಲಿ ಮಕ್ಕಳ ಆಸಕ್ತಿಯನ್ನು ಗುರುತಿಸಿ ಪ್ರೋತ್ಸಾಹಿಸುವುದು ಬಹಳ ಮುಖ್ಯ. ಜೊತೆಗೆ ಕರಾವಳಿಯಲ್ಲಿ ಹಾಡು ನೀ ಹಾಡು ತಂಡ ಗ್ರಾಮೀಣ ಪ್ರತಿಭೆಗಳನ್ನು ಗುರುತಿಸಿ ಇಂತಹ ದೊಡ್ಡ ವೇದಿಕೆ ಕಲ್ಪಿಸಿಕೊಟ್ಟಿರುವುದು ಶ್ಲಾಘನೀಯ. ಈ ಕಾರ್ಯಕ್ರಮ ದೇಶ ವಿದೇಶಗಳಲ್ಲಿ ಯಶಸ್ಸಿನ ಕಹಳೆ ಮೊಳಗಿಸಲಿ ಎಂದು ಶುಭಹಾರೈಸಿದರು.
ಈ ಸಂದರ್ಭದಲ್ಲಿ ಲಯನ್ಸ್ ಕ್ಲಬ್ ಮಣಿಪಾಲ್ ಇದರ ಸೆಕ್ರೆಟರಿ ಲಯನ್ ಡಾಕ್ಟರ್ ಗಣೇಶ್ ಪೈ, ಹಾಡು ನೀ ಹಾಡು ಕಾರ್ಯಕ್ರಮದ ಮುಖಸ್ಥೆ ಸರಿತಾ ಸಂತೋಷ್, ರಿಧಿ ಕ್ರಿಯೇಷನ್ಸ್ ಸಿನಿ ಸ್ಟುಡಿಯೋ ಮತ್ತು V4 ನ್ಯೂಸ್ ಉಡುಪಿ ಇದರ ಮುಖ್ಯಸ್ಥ ಜಯಂತ್ ಐತಾಳ್ ಮತ್ತು ವಿನಾಯಕ್ ಮಲ್ಯ ಹಾಗೂ ಹಾಡು ನೀ ಹಾಡು ಕಾರ್ಯಕ್ರಮದ ನಿರ್ಣಾಯಕರಲ್ಲಿ ಒಬ್ಬರಾದ ಸುಹಾಸ್ ಕೌಶಿಕ್, ಮೆಂಟರ್ಸ್ ಕೃಪಾ ಪ್ರಸೀದ್ , ವಿಜಯ ಸತ್ಯ, ಪ್ರೋಗ್ರಾಮ್ ಕೊ-ಆರ್ಡಿನೇಟರ್ ಸೌಜನ್ಯ, ತಂಡದ ಮುಖ್ಯ ಸದಸ್ಯರಾದ ಕಾರ್ತಿಕ್ , ವಿರಾಜ್, ಗೌತಮ್ ತಲ್ವಾಲ್ಕರ್ ಇನ್ನಿತರು ಉಪಸ್ಥಿತರಿದ್ಧರು.