ಉಡುಪಿ: ಶ್ರೀ ಲಕ್ಷ್ಮಿ ವೆಂಕಟೇಶ ದೇವಸ್ಥಾನದ ಪದ್ಮ ಸರೋವರದ ತಟದಲ್ಲಿ ನಿರ್ಮಿಸಿದ ವಿಶೇಷ ವೇದಿಕೆಯಲ್ಲಿ ಸೋಮವಾರ ಸಂಜೆ ಹಣತೆ ದೀಪಾಲಂಕಾರದೊಂದಿಗೆ ಮುಕ್ಕೋಟಿ ದ್ವಾದಶಿಯ ಶುಭ ಪರ್ವದಲ್ಲಿ ಗೌಡ ಸಾರಸ್ವತ ಯುವಕ ಮಂಡಳಿಯ ಸಂಯೋಜನೆಯಲ್ಲಿ ಶ್ರೀ ಕೃಷ್ಣ ಜ್ಯುವೆಲರಿ ಮಾರ್ಟ್, ಉಡುಪಿ ಇವರ ಪ್ರಾಯೋಜಕತ್ವದಲ್ಲಿ ದಿ| ರಾಘವೇಂದ್ರ ಭಟ್ ಉಡುಪಿ ಇವರ ಜನ್ಮ ಶತಾಬ್ದಿ ಸಂಸ್ಮರಣೆ ಕಾರ್ಯಕ್ರಮವು ಜರಗಿತು.
ಮಹಾರಾಷ್ಟ್ರದ ಪ್ರಸಿದ್ಧ ಕಲಾವಿದರಾದ ಓಂ ಬೊಂಗಾನೆ ಇವರಿಂದ ಅಭಂಗವಾಣಿ ಕಾರ್ಯಕ್ರಮವು ಸೂರಜ್ ಗೊಂಧಲಿ ಹಾಗೂ ಶ್ರೀವತ್ಸ ಶರ್ಮಾ ಇವರ ಸಂಗಡದಲ್ಲಿ ನಡೆಯಿತು. ಸಂಪ್ರೀತ್ ಶೆಣೈ – ಹಾರ್ಮೋನಿಯಂ, ವಿಠ್ಠಲ್ ನಾಯಕ್ – ಕೊಳಲು, ಶ್ರೀಶ ಶೆಣೈ – ಮಂಜೀರ, ಆದಿತ್ಯ, ಕಾರ್ತಿಕ್ ಹಾಗೂ ರಘುನಂದನ್ ಸಾಥ್ ನೀಡಿದರು. ಕಲಾವಿದರನ್ನು ದೇವಳದ ವತಿಯಿಂದ ಗೌರವಿಸಲಾಯಿತು.
ಕಾರ್ಯಕ್ರಮದ ಕೊನೆಯಲ್ಲಿ ಶ್ರೀ ದೇವರ ತೆಪ್ಪೋತ್ಸವ ನೆಡೆಸಿ ಮಹಾ ಪೂಜೆಯ ಬಳಿಕ ಪ್ರಸಾದ ವಿತರಣೆ ನಡೆಯಿತು.
ದೇವಸ್ಥಾನದ ಆಡಳಿತ ಮೊಕ್ತೇಸರ ಪಿ.ವಿ ಶೆಣೈ, ಕಾಶೀನಾಥ್ ಭಟ್, ಬದ್ರಿನಾಥ್ ಭಟ್, ಜಯರಾಂ ಭಟ್ ,ಜಿ ಎಸ್ ಬಿ ಯುವಕ ಮಂಡಳಿಯ ಅಧ್ಯಕ್ಷ ನಿತೇಶ್ ಶೆಣೈ, ಸಮಿತಿಯ ಪದಿಕಾರಿಗಳು ಹಾಗೂ ಸ್ವಯಂಸೇವಕರು ಉಪಸ್ಥಿತರಿದ್ದರು.












