ಪ್ರತ್ಯೇಕ ಮೀನುಗಾರಿಕೆ ಖಾತೆ ಸೇರ್ಪಡೆ ಸ್ವಾಗತಾರ್ಹ: ನಯನ ಗಣೇಶ್

ಉಡುಪಿ: ಕೇಂದ್ರ ಸಚಿವ  ಸಂಪುಟದಲ್ಲಿ ಮೀನುಗಾರಿಕೆ ಖಾತೆ ಸೇರ್ಪಡೆ ಮಾಡಿ ಗಿರಿರಾಜ್ ಸಿಂಗ್ ಅವರನ್ನು ಮೊದಲ ಸಚಿವರನ್ನಾಗಿ ನೇಮಕ ಮಾಡಿದ ಪ್ರಧಾನಿ ನರೇಂದ್ರ ಮೋದಿ ಯವರ  ನಿರ್ಧಾರ ವನ್ನು ಮಹಿಳಾ ಮೋರ್ಚಾ ಅಧ್ಯಕ್ಷೆ ನಯನ ಗಣೇಶ್ ಸ್ವಾಗತಿಸಿದ್ದರೆ. ಚುನಾವಣಾ ಪೂರ್ವ ದಲ್ಲಿ ನೀಡಿದ ಅಶ್ವಾಸನೆಯಂತೆ ಪ್ರಧಾನಿ ಯವರು ಮೊದಲ ಕ್ಯಾಬಿನೆಟ್ ಲ್ಲಿ ಹೊಸ ಇಲಾಖೆಯನ್ನು ಸೇರ್ಪಡೆ ಮಾಡಿ ಕರಾವಳಿಯಾ ಮೀನುಗಾರ ಹಿತವನ್ನು ಕಾಪಾಡಿಕೊಳ್ಳುವ ಕಾರ್ಯ ಮಾಡಿದ್ದು ಮುಂದಿನ ದಿನಗಳಲ್ಲಿ ಈ ಇಲಾಖೆ ಮೀನುಗಾರ ಸಮಸ್ಯೆ ಗಳಿಗೆ ಪ್ರಾಮಾಣಿಕವಾಗಿ ಸ್ಪಂಧಿಸುವ ಕಾರ್ಯ ಮಾಡಲಿದೆಯೆಂದು ನಯನ ಗಣೇಶ್ ಪತ್ರಿಕಾ ಹೇಳಿಕೆ ಯಲ್ಲಿ ತಿಳಿಸಿದ್ದಾರೆ