ಕಾರ್ಕಳ: ಪದವಿ ಪೂರ್ವ ಶಿಕ್ಷಣ ಇಲಾಖೆಯ ವತಿಯಿಂದ ಹಾಸನ ಜಿಲ್ಲೆಯ ಹೆಚ್.ಕೆ.ಎಸ್. ಪಿ.ಯು.ಕಾಲೇಜಿನ ಆಶ್ರಯದಲ್ಲಿ ಡಿ. 1 ರಂದು ನಡೆದ ವಿಭಾಗ ಮಟ್ಟದ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಕಾರ್ಕಳ ಜ್ಞಾನಸುಧಾದ ಮೂವರು ವಿದ್ಯಾರ್ಥಿಗಳು ವಿಜೇತರಾಗಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಆತ್ಮಿಕಾ ಶೆಟ್ಟಿ ಇವರು ಇಂಗ್ಲಿಷ್ ಆಶು ಭಾಷಣ ಸ್ಫರ್ಧೆಯಲ್ಲಿ ಪ್ರಥಮ, ವೈಷ್ಣವಿ ಶೆಟ್ಟಿ ಇವರು ಕನ್ನಡ ಚರ್ಚಾ ಸ್ಫರ್ಧೆಯಲ್ಲಿ ದ್ವಿತೀಯ ಹಾಗೂ ತನ್ವಿ ಶೆಟ್ಟಿ ಇವರು ಇಂಗ್ಲಿಷ್ ಆಶು ಭಾಷಣದಲ್ಲಿ ದ್ವಿತೀಯ ಸ್ಥಾನವನ್ನು ಗಳಿಸಿದ್ದಾರೆ.
ಇವರನ್ನು ಎಪಿಜಿಇಟಿ ಯ ಅಧ್ಯಕ್ಷ ಡಾ.ಸುಧಾಕರ ಶೆಟ್ಟಿಯವರು ಅಭಿನಂದಿಸಿದ್ದಾರೆ.