ಮಾರ್ಪಳ್ಳಿ ಯಕ್ಷಗಾನ ಕಲಾಮಂಡಳಿಯ ಕರಾಟೆ ವಿದ್ಯಾರ್ಥಿಗಳಿಂದ ಅಮೋಘ ಸಾಧನೆ

ಉಡುಪಿ: ಕೆನೆ-ಈ- ಮಾಬುನಿ-ಶೀಟೋ-ರಿಯೋ-ಕರಾಟೆ ಸ್ಕೂಲ್ ಆಫ್ ಇಂಡಿಯಾ ಇವರ ವತಿಯಿಂದ ನ.6 ರಂದು ಕಟಪಾಡಿಯ ಥಂಡರ್ಸ್ ಗ್ರ್ಯಾಂಡ್ ಬೇ ಸುಭಾಷ್ ನಗರ ಕುರ್ಕಾಲ್ ನಲ್ಲಿ ನಡೆದ ರಾಜ್ಯ ಮಟ್ಟದ ಕರಾಟೆ ಚಾಂಪಿಯನ್ ಶಿಪ್ ನಲ್ಲಿ ಉಡುಪಿಯ ಪ್ರತಿಷ್ಠಿತ ಸಂಸ್ಥೆ ಬುಡೋಕಾನ್ ಕರಾಟೆ ಆಂಡ್ ಸೆಲ್ಫ್ ಡಿಫೆನ್ಸ್ ನ ಮಾರ್ಪಳ್ಳಿ ಯಕ್ಷಗಾನ ಕಲಾಮಂಡಳಿಯ ಕರಾಟೆ ತರಗತಿಯ ವಿದ್ಯಾರ್ಥಿಗಳು 36 ಪ್ರಥಮ ಬಹುಮಾನ, 30 ದ್ವಿತೀಯ ಬಹುಮಾನ, 9 ತೃತೀಯ ಬಹುಮಾನ ಹಾಗೂ ಒಂದು ಗ್ರ್ಯಾಂಡ್ ಚಾಂಪಿಯನ್ ಶಿಪ್ ಅನ್ನು ಪಡೆದಿದ್ದಾರೆ.

ಮಾರ್ಪಳ್ಳಿ ಯಕ್ಷಗಾನ ಕಲಾಮಂಡಳಿಯ ಅಧ್ಯಕ್ಷ ಸದಾಶಿವ ಶೆಟ್ಟಿ, ಕಾರ್ಯದರ್ಶಿ ವಿಷ್ಣುಮೂರ್ತಿ ಉಪಾಧ್ಯಾಯ, ಕರಾಟೆ ಮುಖ್ಯ ಶಿಕ್ಷಕ ಲಕ್ಷ್ಮೀ ನಾರಾಯಣ ಬಿ ಆಚಾರ್ಯ, ಶಿಕ್ಷಕ ದಯಾನಂದ ಆಚಾರ್ಯ, ಸುದೇಶ್, ಸ್ವಸ್ತಿಕ್, ಅನುಶ್, ಸಾನ್ವಿ, ಆದಿತ್ಯ ಹಾಗೂ ಎಲ್ಲ ವಿಜೇತ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.