ಕ್ಯಾರೆಟ್ ಮಿಲ್ಕ್ ಶೇಕ್
ಬೇಕಾಗುವ ಸಾಮಗ್ರಿಗಳು:
1 ಕ್ಯಾರೆಟ್, 4 ಗೋಡಂಬಿ, 2 ಕಾರ್ಜುರ, ಎರಡು ಕಪ್ ಹಾಲು, 2 ಸ್ಪೂನ್ ಸಕ್ಕರೆ, ಸ್ವಲ್ಪ ಏಲಕ್ಕಿ ಪುಡಿ
ಮಾಡುವ ವಿಧಾನ:
ಕ್ಯಾರೆಟ್, ಗೋಡಂಬಿ, ಖರ್ಜೂರವನ್ನು ಸ್ವಲ್ಪ ನೀರು ಹಾಕಿ ಕುಕ್ಕರ್ ನಲ್ಲಿ ಬೇಯಿಸಿಕೊಳ್ಳಿ, ಮಿಕ್ಸಿ ಜಾರ್ಗಿ ಹಾಲು ಸಕ್ಕರೆ ಏಲಕ್ಕಿ ಪುಡಿ ಹಾಗೂ ಬೇಯಿಸಿದ ಕ್ಯಾರೆಟ್ ಹಾಕಿ ಗ್ರೈಂಡ್ ಮಾಡಿಕೊಳ್ಳಿ.
ಮಿಕ್ಸಿ ಜಾರ್ ಗೆ ಹಾಲು, ಸಕ್ಕರೆ, ಏಲಕ್ಕಿ ಪುಡಿ, ಹಾಗೂ ಬೇಯಿಸಿದ ಕ್ಯಾರೆಟ್ ಹಾಕಿ ಗ್ರೈಂಡ್ ಮಾಡಿಕೊಳ್ಳಿ, ಈಗ ಕ್ಯಾರೆಟ್ ಮಿಲ್ಗಕ ಶೇಕ್ ಕುಡಿಯಲು ಸಿದ್ಧ. ಬೇಕಾದಲ್ಲಿ ಕೋಲ್ಡ್ ಮಿಲ್ಕ್ ಉಪಯೋಗಿಸಬಹುದು ಅಥವಾ ಮಿಲ್ಕ್ ಶೇಕ್ ಅನ್ನು ಫ್ರಿಜ್ ನಲ್ಲಿ ಸ್ವಲ್ಪ ಹೊತ್ತು ಇಟ್ಟ ನಂತರ ಸವಿಯಬಹುದು.
ಮ್ಯಾಂಗೋ ಜ್ಯೂಸ್
ಒಂದು ಮಾವಿನಹಣ್ಣು, 3-4 ಸ್ಪೂನ್ ಶುಗರ್, 2 ಕ್ಲಾಸ್ ಕೋಲ್ಡ್ ಮಿಲ್ಕ್.
ಮೊದಲು ಮ್ಯಾಂಗೋ ಸಿಪ್ಪೆ ತೆಗೆದು ಸಣ್ಣ ಪೀಸ್ ಮಾಡಿಕೊಳ್ಳಿ, ನಂತರ ಮ್ಯಾಂಗೋ ಪೀಸ್ ಅನ್ನು ಮಿಕ್ಸಿಗೆ ಹಾಕಿ ಗ್ರೈಂಡ್ ಮಾಡಿಕೊಳ್ಳಿ, ನಂತರ ಅದಕ್ಕೆ ಕೋಲ್ಡ್ ಮಿಲ್ಕ್, ಶುಗರ್ ಹಾಗೂ ನಿಮಗೆ ಬೇಕಾದರೆ ಸ್ವಲ್ಪ ಏಲಕ್ಕಿಯನ್ನು ಪುಡಿ ಮಾಡಿ ಹಾಕಿ ಇನ್ನೊಮ್ಮೆ ಮಿಕ್ಸಿ ಲಿ ಗ್ರೈಂಡ್ ಮಾಡಿ, ಮಿಕ್ಸಿಗೆ ನಿಮಗೆ ಎಷ್ಟು ಬೇಕೋ ಅಷ್ಟು ಮಿಲ್ಕ್ ಹಾಕಬಹುದು,
ಈಗ ಮ್ಯಾಂಗೋ ಜ್ಯೂಸ್ ರೆಡಿ.