ಉಡುಪಿ: ಕೊಡವೂರು ವಾರ್ಡ್ ಸಮಿತಿ ವತಿಯಿಂದ ನಗರಸಭಾ ಸದಸ್ಯ ವಿಜಯ್ ಕೊಡವೂರು ನೇತೃತ್ವದಲ್ಲಿ ಸಂಚಾರಿ ಆಸ್ಪತ್ರೆ ಎನ್ನುವ ಕಲ್ಪನೆಯೊಂದಿಗೆ ಕಾರ್ಯಕ್ರಮವನ್ನು ಕೈಗೊಳ್ಳುತ್ತಿದ್ದು, ಮಲ್ಪೆ ಸರ್ಕಾರಿ ಆಸ್ಪತ್ರೆಯ ಉಪಕೇಂದ್ರದ ಸಹಕಾರದೊಂದಿಗೆ ಮನೆಯಿಂದ ಹೊರ ಹೋಗಲು ಅಸಮರ್ಥ ರೋಗಿಗಳು, ಅಂಗವಿಕಲರು, ಹಾಗೂ ವೃದ್ಧರ ಮನೆಗಳನ್ನು ಗುರುತಿಸಿ ಮಹಿಳಾ ಸಮಿತಿಯ ಸಹಕಾರ ಹಾಗೂ ದಾನಿಗಳ ನೆರವಿನಿಂದ ಅವರ ಮನೆಗೆ ಭೇಟಿ ನೀಡಿ ಆರೋಗ್ಯ ತಪಾಸಣೆ ಮಾಡುವಂತಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಪ್ರತಿ ತಿಂಗಳು ಆಯ್ದ 13 ಮನೆಗಳಿಗೆ ತೆರಳಿ ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸೆ ನೀಡುವುದು ಈ ಕಾರ್ಯಕ್ರಮದ ಉದ್ದೇಶ.
ಈ ಮನೆ ಮನೆ ಆರೋಗ್ಯ ತಪಾಸಣಾ ಕಾರ್ಯಕ್ರಮಕ್ಕೆ ವಾಹನದ ವ್ಯವಸ್ಥೆಯನ್ನು ರವಿರಾಜ ಕೊಡವೂರು ಇವರು ಮಾಡಿದ್ದಾರೆ. ಈ ಸಂದರ್ಭದಲ್ಲಿ ಸಮುದಾಯ ಆರೋಗ್ಯ ಅಧಿಕಾರಿ ಮೈತ್ರಿ, ಮಹಿಳಾ ಸಮಿತಿ ಪ್ರಮುಖರಾದ ಪ್ರೀತಿ, ಗುಣವತಿ, ಆಶಾ ಕಾರ್ಯಕರ್ತೆಯರಾದ ಮಾಲತಿ ಮತ್ತಿತರರು ಉಪಸ್ಥಿತರಿದ್ದರು.