ಹಿರಿಯಡ್ಕ: ಹಿರಿಯಡ್ಕದ ಚೆನ್ನಿಬೆಟ್ಟು ಮದಗ ನಿವಾಸಿ ವಯೋ ವೃದ್ದೆ ಸರಸ್ವತಿ (98) ಎಂಬವರ ಮನೆಯಲ್ಲಿ ಆಕೆಯ ಆರೈಕೆಗಾಗಿ ಉಡುಪಿ ಉಷಾ ಮ್ಯಾರೇಜ್ ಬ್ಯುರೋ ಜಾಬ್ ಲಿಂಕ್ಸ್ ಏಜೆನ್ಸಿ ಮೂಲಕ ಕೆಲಸಕ್ಕೆ ಹೋಂ ನರ್ಸ್ ಅನ್ನು ನೇಮಿಸಲಾಗಿತ್ತು. ಬಾಗಲಕೋಟೆ ಮೂಲದ ರೇಖಾ ಹೆಬ್ಬಳ್ಳಿ ಎನ್ನುವಾಕೆ ಕೆಲಸಕ್ಕೆಂದು ಬಂದಿದ್ದ ಸಮಯದಲ್ಲಿ ಸರಸ್ವತಿಯವರು ಮನೆಯಲ್ಲಿ ಒಬ್ಬರೇ ಇದ್ದದ್ದನ್ನು ಮನಗಂಡು ಅವರ ಕುತ್ತಿಗೆಯಲ್ಲಿದ್ದ ಸುಮಾರು 1.45 ಲಕ್ಷ ಮೌಲ್ಯದ ಚಿನ್ನದ ಸರವನ್ನು ಎಗರಿಸಿ ಪರಾರಿಯಾಗಿದ್ದಳು ಎನ್ನಲಾಗಿದೆ.
ಹಿರಿಯಡ್ಕ ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದರು. ಇದೀಗ ಪೊಲೀಸರು ಆಕೆಯನ್ನು ಬಂಧಿಸಿ ವಶಕ್ಕೆ ಪಡೆದುಕೊಂಡಿದ್ದಾರೆ.